Turn Off
21st Century KJV
A Conservative Version
American King James Version (1999)
American Standard Version (1901)
Amplified Bible (1965)
Apostles' Bible Complete (2004)
Bengali Bible
Bible in Basic English (1964)
Bishop's Bible
Complementary English Version (1995)
Coverdale Bible (1535)
Easy to Read Revised Version (2005)
English Jubilee 2000 Bible (2000)
English Lo Parishuddha Grandham
English Standard Version (2001)
Geneva Bible (1599)
Hebrew Names Version
Hindi Bible
Holman Christian Standard Bible (2004)
Holy Bible Revised Version (1885)
Kannada Bible
King James Version (1769)
Literal Translation of Holy Bible (2000)
Malayalam Bible
Modern King James Version (1962)
New American Bible
New American Standard Bible (1995)
New Century Version (1991)
New English Translation (2005)
New International Reader's Version (1998)
New International Version (1984) (US)
New International Version (UK)
New King James Version (1982)
New Life Version (1969)
New Living Translation (1996)
New Revised Standard Version (1989)
Restored Name KJV
Revised Standard Version (1952)
Revised Version (1881-1885)
Revised Webster Update (1995)
Rotherhams Emphasized Bible (1902)
Tamil Bible
Telugu Bible (BSI)
Telugu Bible (WBTC)
The Complete Jewish Bible (1998)
The Darby Bible (1890)
The Douay-Rheims American Bible (1899)
The Message Bible (2002)
The New Jerusalem Bible
The Webster Bible (1833)
Third Millennium Bible (1998)
Today's English Version (Good News Bible) (1992)
Today's New International Version (2005)
Tyndale Bible (1534)
Tyndale-Rogers-Coverdale-Cranmer Bible (1537)
Updated Bible (2006)
Voice In Wilderness (2006)
World English Bible
Wycliffe Bible (1395)
Young's Literal Translation (1898)
Cross Reference Bible
1. इन बातों के बाद यीशु गलील की झील अर्थात् तिबिरियास की झील के पास गया।
1. ಇವುಗಳಾದ ಮೇಲೆ ಯೇಸು ತಿಬೇರಿ ಯವೆಂಬ ಗಲಿಲಾಯ ಸಮುದ್ರದ ಆಚೆಗೆ ಹೋದನು.
2. और एक बड़ी भीड़ उसके पीछे हो ली कयोंकि जो आश्चर्य कर्म वह बीमारों पर दिखाता था वे उन को देखते थे।
2. ಆಗ ಆತನು ರೋಗಿಗಳಲ್ಲಿ ನಡಿಸಿದ ಆತನ ಅದ್ಭುತ ಕಾರ್ಯಗಳನ್ನು ನೋಡಿದ ಜನರ ದೊಡ್ಡ ಸಮೂಹವು ಆತನನ್ನು ಹಿಂಬಾಲಿಸುತ್ತಿತ್ತು.
3. तब यीशु पहाड़ पर चढ़कर अपने चेलों के साथ वहां बैठा।
3. ಯೇಸು ಬೆಟ್ಟವನ್ನೇರಿ ಅಲ್ಲಿ ತನ್ನ ಶಿಷ್ಯರೊಂದಿಗೆ ಕೂತು ಕೊಂಡನು.
4. और यहूदियों के फसह के पर्ब्ब निकट था।
4. ಆಗ ಯೆಹೂದ್ಯರ ಪಸ್ಕ ಹಬ್ಬವು ಸವಿಾಪವಾಗಿತ್ತು.
5. तब यीशु ने अपनी आंखे उठाकर एक बड़ी भीड़ को अपने पास आते देखा, और फिलिप्पुस से कहा, कि हम इन के भोजन के लिये कहां से रोटी मोल लाएं?
5. ಜನರ ದೊಡ್ಡ ಗುಂಪು ತನ್ನ ಕಡೆಗೆ ಬರುವದನ್ನು ಯೇಸು ಕಣ್ಣೆತ್ತಿ ನೋಡಿ ಫಿಲಿಪ್ಪ ನಿಗೆ--ಇವರು ಊಟ ಮಾಡುವಂತೆ ನಾವು ರೊಟ್ಟಿ ಯನ್ನು ಎಲ್ಲಿಂದ ಕೊಂಡು ತರೋಣ ಅಂದನು.
6. परन्तु उस ने यह बात उसे परखने के लिये कही; क्योंकि वह आप जानता था कि मैं क्या करूंगा।
6. ಅವ ನನ್ನು ಪರೀಕ್ಷಿಸುವದಕ್ಕಾಗಿ ಆತನು ಇದನ್ನು ಹೇಳಿದನು; ಯಾಕಂದರೆ ತಾನು ಮಾಡಬೇಕೆಂದಿದ್ದದ್ದು ಆತನು ತಾನೇ ತಿಳಿದವನಾಗಿದ್ದನು.
7. फिलिप्पुस ने उस को उत्तर दिया, कि दो सौ दीनार की रोटी उन के लिये पूरी भी न होंगी कि उन में से हर एक को थोड़ी थोड़ी मिल जाए।
7. ಫಿಲಿಪ್ಪನು ಪ್ರತ್ಯುತ್ತರ ವಾಗಿ ಆತನಿಗೆ--ಇವರಲ್ಲಿ ಪ್ರತಿಯೊಬ್ಬನು ಸ್ವಲ್ಪ ಸ್ವಲ್ಪ ತಿಂದರೂ ಇನ್ನೂರು ಹಣಗಳಷ್ಟು ರೊಟ್ಟಿಗಳು ಅವ ರಿಗೆ ಸಾಲುವದಿಲ್ಲ ಅಂದನು.
8. उसके चेलों में से शमौन पतरस के भाई अन्द्रियास ने उस से कहा।
8. ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ಸಹೋದರನಾದ ಅಂದ್ರೆಯನು ಆತನಿಗೆ--
9. यहां एक लड़का है जिस के पास जव की पांच रोटी और दो मछलियां हैं परन्तु इतने लोगों के लिये वे क्या हैं।
9. ಇಲ್ಲಿ ಒಬ್ಬ ಹುಡುಗನಿ ದ್ದಾನೆ; ಅವನಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಸಣ್ಣ ವಿಾನುಗಳೂ ಅವೆ; ಆದರೆ ಇಷ್ಟೊಂದು ಜನರಿಗೆ ಅವು ಯಾತಕ್ಕಾದಾವು ಅಂದನು.
10. यीशु ने कहा, कि लोगों को बैठा दो। उस जगह बहुत घास थी: तब वे लोग जो गिनती में लगभग पांच हजार के थे, बैठ गए:
10. ಆಗ ಯೇಸು--ಜನರನ್ನು ಕೂಡ್ರಿಸಿರಿ ಅಂದನು. ಆ ಸ್ಥಳ ದಲ್ಲಿ ಬಹಳ ಹುಲ್ಲು ಇರಲಾಗಿ ಜನರೆಲ್ಲರು ಕುಳಿತು ಕೊಂಡರು ಅವರಲ್ಲಿ ಸುಮಾರು ಐದು ಸಾವಿರ ಪುರುಷರೇ ಇದ್ದರು.
11. तब यीशु ने रोटियां लीं, और धन्यवाद करके बैठनेवालों को बांट दी: और वैसे ही मछलियों में से जितनी वे चाहते थे बांट दिया।
11. ತರುವಾಯ ಯೇಸು ರೊಟ್ಟಿ ಗಳನ್ನು ತೆಗೆದುಕೊಂಡು ಸ್ತೋತ್ರಮಾಡಿ ಶಿಷ್ಯರಿಗೆ ಹಂಚಿದನು; ಅವರು ಕುಳಿತುಕೊಂಡವರಿಗೆ ಹಂಚಿ ದರು; ಅದೇ ರೀತಿಯಲ್ಲಿ ವಿಾನುಗಳನ್ನು ಅವರಿಗೆ ಬೇಕಾದಷ್ಟು ಹಂಚಿದರು.
12. जब वे खाकर तृप्त हो गए तो उस ने अपने चेलों से कहा, कि बचे हुए टुकड़े बटोर लो, कि कुछ फेंका न जाए।
12. ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ--ಏನೂ ನಷ್ಟವಾಗ ದಂತೆ ಮಿಕ್ಕಿದ ತುಂಡುಗಳನ್ನು ಕೂಡಿಸಿರಿ ಅಂದನು.
13. सो उन्हों ने बटोरा, और जव की पांच रोटियों के टुकड़े जो खानेवालों से बच रहे थे उन की बारह टोकरियां भरीं।
13. ಆದದರಿಂದ ಅವರು ಐದು ಜವೆಗೋದಿಯ ರೊಟ್ಟಿಗಳಲ್ಲಿ ತಿಂದವರಿಂದ ಮಿಕ್ಕಿದ ತುಂಡುಗಳನ್ನು ಕೂಡಿಸಿ ಹನ್ನೆರಡು ಪುಟ್ಟಿಗಳಲ್ಲಿ ತುಂಬಿದರು.
14. तब जो आश्चर्य कर्म उस ने कर दिखाया उसे वे लोग देखकर कहने लगे; कि वह भविष्यद्वक्ता जो जगत में आनेवाला था निश्चय यही है।व्यवस्थाविवरण 18:15, व्यवस्थाविवरण 18:18
14. ಬಳಿಕ ಆ ಜನರು ಯೇಸು ಮಾಡಿದ ಅದ್ಭುತ ಕಾರ್ಯವನ್ನು ನೋಡಿ--ನಿಜವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಆ ಪ್ರವಾದಿಯು ಈತನೇ ಅಂದರು.
15. यीशु यह जानकर कि वे मुझे राजा बनाने के लिये आकर पकड़ना चाहते हैं, फिर पहाड़ पर अकेला चला गया।
15. ಆದದರಿಂದ ಅವರು ಬಂದು ತನ್ನನ್ನು ಒತ್ತಾಯ ದಿಂದ ತೆಗೆದುಕೊಂಡು ಹೋಗಿ ಅರಸನನ್ನಾಗಿ ಮಾಡ ಬೇಕೆಂದಿದ್ದಾರೆಂದು ಯೇಸು ತಿಳಿದು ಅಲ್ಲಿಂದ ತಿರಿಗಿ ತಾನೊಬ್ಬನೇ ಒಂಟಿಗನಾಗಿ ಒಂದು ಬೆಟ್ಟಕ್ಕೆ ಹೊರಟು ಹೋದನು.
16. फिर जब संध्या हुई, तो उसके चेले झील के किनारे गए।
16. ಸಾಯಂಕಾಲವಾದಾಗ ಆತನ ಶಿಷ್ಯರು ಸಮುದ್ರಕ್ಕೆ ಹೊರಟುಹೋಗಿ
17. और नाव पर चढ़कर झील के पार कफरनहूम को जाने लगे: उस समय अन्धेरा हो गया था, और यीशु अभी तक उन के पास नहीं आया था।
17. ದೋಣಿಯನ್ನು ಹತ್ತಿ ಸಮುದ್ರಮಾರ್ಗವಾಗಿ ಕಪೆರ್ನೌಮಿಗೆ ಹೋಗುತ್ತಿ ದ್ದರು. ಆಗಲೇ ಕತ್ತಲಾಗಿತ್ತು , ಯೇಸು ಅವರ ಬಳಿಗೆ ಬಂದಿರಲಿಲ್ಲ.
18. और आन्धी के कारण झील में लहरे उठने लगीं।
18. ಆಗ ಬಲವಾದ ಗಾಳಿಯು ಬೀಸಿದ್ದ ರಿಂದ ಸಮುದ್ರವು ಅಲ್ಲಕಲ್ಲೋಲವಾಯಿತು.
19. सो जब वे खेते खेते तीन चार मील के लगभग निकल गए, तो उन्हों ने यीशु को झील पर चलते, और नाव के निकट आते देखा, और डर गए।
19. ಹೀಗೆ ಅವರು ಹುಟ್ಟು ಹಾಕುತ್ತಾ ಒಂದು ಹರದಾರಿಯಷ್ಟು ದೂರ ಹೋದ ಮೇಲೆ ಯೇಸು ಸಮುದ್ರದ ಮೇಲೆ ನಡೆದು ತಮ್ಮ ದೋಣಿಯ ಕಡೆಗೆ ಸವಿಾಪಿಸುತ್ತಿರು ವದನ್ನು ಅವರು ಕಂಡು ಭಯಪಟ್ಟರು.
20. परन्तु उस ने उन से कहा, कि मैं हूं; डरो मत।
20. ಆದರೆ ಆತನು ಅವರಿಗೆ--ನಾನೇ, ಭಯಪಡಬೇಡಿರಿ ಅಂದನು.
21. सो वे उसे नाव पर चढ़ा लेने के लिये तैयार हुए और तुरन्त वह नाव के स्थान पर जा पहुंची जहां वह जाते थे।
21. ಆಗ ಅವರು ಮನಃಪೂರ್ವಕವಾಗಿ ಆತನನ್ನು ದೋಣಿಯಲ್ಲಿ ಸೇರಿಸಿಕೊಂಡರು; ಕೂಡಲೆ ದೋಣಿಯು ಅವರು ಹೋಗುವದಕ್ಕಿದ್ದ ದಡಕ್ಕೆ ಸೇರಿತು.
22. दूसरे दिन उस भीड़ ने, जो झील के पार खड़ी थी, यह देखा, कि यहां एक को छोड़कर और कोई छोटी नाव न थी, और यीशु अपने चेलों के साथ उस नाव पर न चढ़ा, परन्तु केवल उसके चेले चले गए थे।
22. ಆತನ ಶಿಷ್ಯರು ಹತ್ತಿದ ಒಂದೇ ದೋಣಿಯ ಹೊರತು ಮತ್ತೊಂದು ಅಲ್ಲಿ ಇರಲಿಲ್ಲವೆಂದೂ ಆತನ ಶಿಷ್ಯರು ಮಾತ್ರ ಹೋದರೆಂದೂ ಯೇಸು ತನ್ನ ಶಿಷ್ಯರ ಸಂಗಡ ದೋಣಿಯಲ್ಲಿ ಹೋಗಲಿಲ್ಲವೆಂದೂ ಮರು ದಿನ ಸಮುದ್ರದ ಆಚೆಯಲ್ಲಿ ನಿಂತಿದ್ದ ಜನರು ನೋಡಿ ದ್ದರು.
23. (तौभी और छोटी नावें तिबिरियास से उस जगह के निकट आई, जहां उन्हों ने प्रभु के धन्यवाद करने के बाद रोटी खाई थी।)
23. (ಆದಾಗ್ಯೂ ಕರ್ತನು ಸ್ತೋತ್ರ ಮಾಡಿದ ನಂತರ ಅವರು ರೊಟ್ಟಿಯನ್ನು ತಿಂದ ಸ್ಥಳದ ಸವಿಾಪಕ್ಕೆ ತಿಬೇರಿಯದಿಂದ ಬೇರೆ ದೋಣಿಗಳು ಬಂದವು).
24. सो जब भीड़ ने देखा, कि यहां न यीशु है, और न उसके चेले, तो वे भी छोटी छोटी नावों पर चढ़ के यीशु को ढूंढ़ते हुए कफरनहूम को पहुंचे।
24. ಆಗ ಯೇಸು ಮತ್ತು ಆತನ ಶಿಷ್ಯರು ಅಲ್ಲಿ ಇಲ್ಲದಿರುವದನ್ನು ಜನರು ನೋಡಿ ಅವರು ಸಹ ದೋಣಿಗಳಲ್ಲಿ ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು.
25. और झील के पार उस से मिलकर कहा, हे रब्बी, तू यहां कब आया?
25. ಅವರು ಆತನನ್ನು ಸಮು ದ್ರದ ಆಚೇಕಡೆಯಲ್ಲಿ ಕಂಡು ಆತನಿಗೆ--ರಬ್ಬಿಯೇ, ನೀನು ಇಲ್ಲಿಗೆ ಯಾವಾಗ ಬಂದಿ ಅಂದರು.
26. यीशु ने उन्हें उत्तर दिया, कि मैं तुम से सच सच कहता हूं, तुम मुझे इसलिये नहीं ढूंढ़ते हो कि तुम ने अचम्भित काम देखे, परन्तु इसलिये कि तुम रोटियां खाकर तृप्त हुए।
26. ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜನಿಜ ವಾಗಿ ಹೇಳುತ್ತೇನೆ, ನೀವು ನನ್ನನ್ನು ಹುಡುಕುವದು ಅದ್ಭುತಕಾರ್ಯಗಳನ್ನು ನೋಡಿದ್ದರಿಂದಲ್ಲ, ಆದರೆ ರೊಟ್ಟಿಗಳನ್ನು ತಿಂದು ತೃಪ್ತಿ ಹೊಂದಿದ್ದರಿಂದಲೇ.
27. नाशमान भोजन के लिये परिश्रम न करो, परन्तु उस भोजन के लिये जो अनन्त जीवन तक ठहरता है, जिसे मनुष्य का पुत्रा तुम्हें देगा, क्योंकि पिता, अर्थात् परमेश्वर ने उसी पर छाप कर दी है।
27. ನಾಶವಾಗುವ ಆಹಾರಕ್ಕಾಗಿ ಅಲ್ಲ, ನಿತ್ಯಜೀವ ವನ್ನುಂಟು ಮಾಡುವ ಆಹಾರಕ್ಕೋಸ್ಕರ ದುಡಿಯಿರಿ; ಅದನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ತಂದೆಯಾದ ದೇವರು (ಇದಕ್ಕಾಗಿ) ಆತನಿಗೆ ಮುದ್ರೆ ಹಾಕಿದ್ದಾನೆ ಅಂದನು.
28. उन्हों ने उस से कहा, परमेश्वर के कारर्य करने के लिये हम क्या करें?
28. ಆಗ ಅವರು ಆತನಿಗೆ--ನಾವು ದೇವರ ಕ್ರಿಯೆ ಗಳನ್ನು ಮಾಡುವಂತೆ ಏನು ಮಾಡಬೇಕು ಎಂದು ಕೇಳಿದ್ದಕ್ಕೆ
29. यीशु ने उन्हें उत्तर दिया; परमेश्वर का कारर्य यह है, कि तुम उस पर, जिसे उस ने भेजा है, विश्वास करो।
29. ಯೇಸು ಪ್ರತ್ಯುತ್ತರವಾಗಿ ಅವರಿಗೆ--ದೇವರಕ್ರಿಯೆ ಯಾವದಂದರೆ, ಆತನು ಕಳುಹಿಸಿ ಕೊಟ್ಟಾತನನ್ನು ನೀವು ನಂಬುವದೇ ಅಂದನು.
30. तब उन्हों ने उस से कहा, फिर तू कौन का चिन्ह दिखाता है कि हम उसे देखकर तेरी प्रतीति करें, तू कौन सा काम दिखाता है?
30. ಅದಕ್ಕೆ ಅವರು ಆತನಿಗೆ--ಹಾಗಾದರೆ ನಾವು ನೋಡಿ ನಿನ್ನನ್ನು ನಂಬುವಂತೆ ಯಾವ ಸೂಚಕ ಕಾರ್ಯವನ್ನು ನಮಗೆ ತೋರಿಸುತ್ತೀ? ನೀನು ಯಾವ ಕ್ರಿಯೆಯನ್ನು ಮಾಡುತ್ತೀ?
31. हमारे बापदादों ने जंगल में मन्ना खाया; जैसा लिखा है; कि उस ने उन्हें खाने के लिये स्वर्ग से रोटी दी।निर्गमन 16:4-15, गिनती 11:7-9, Neh-h 9 15, भजन संहिता 78:24, भजन संहिता 105:40
31. ತಿನ್ನುವದಕ್ಕಾಗಿ ಆತನು ಅವರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು ಎಂದು ಬರೆದಿರುವ ಪ್ರಕಾರ ನಮ್ಮ ಪಿತೃಗಳು ಅಡವಿ ಯಲ್ಲಿ ಮನ್ನಾ ತಿಂದರು ಎಂದು ಹೇಳಿದರು.
32. यीशु ने उन से कहा, मैं तुम से सच सच कहता हूं कि मूसा ने तुम्हें वह रोटी स्वर्ग से न दी, परन्तु मेरा पिता तुम्हें सच्ची रोटी स्वर्ग से देता है।
32. ಆಗ ಯೇಸು ಅವರಿಗೆ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಡಲಿಲ್ಲ; ಆದರೆ ನನ್ನ ತಂದೆಯು ನಿಮಗೆ ನಿಜವಾದ ರೊಟ್ಟಿಯನ್ನು ಪರಲೋಕದಿಂದ ಕೊಡು ತ್ತಾನೆ.
33. क्योकि परमेश्वर की रोटी वही है, जो स्वर्ग से उतरकर जगत को जीवन देती है।
33. ಪರಲೋಕದಿಂದ ಕೆಳಗೆ ಬಂದು ಲೋಕಕ್ಕೆ ಜೀವವನ್ನು ಕೊಡುವಾತನೇ ದೇವರ ರೊಟ್ಟಿಯಾಗಿದ್ದಾನೆ ಅಂದನು.
34. तब उन्हों ने उस से कहा, हे प्रभु, यह रोटी हमें सर्वदा दिया कर।
34. ಅದಕ್ಕವರು ಆತನಿಗೆ--ಕರ್ತನೇ, ಈ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು ಅಂದರು.
35. यीशु ने उन से कहा, जीवन की रोटी मैं हूं: जो मेरे पास आएगा वह कभी भूखा न होगा और जो मुझ पर विश्वास करेगा, वह कभी पियासा न होगा।
35. ಅದಕ್ಕೆ ಯೇಸು ಅವರಿಗೆ--ನಾನೇ ಆ ಜೀವದ ರೊಟ್ಟಿ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ ಮತ್ತು ನನ್ನ ಮೇಲೆ ನಂಬಿಕೆ ಇಡುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ.
36. परन्तु मैं ने तुम से कहा, कि तुम ने मुझे देख भी लिया है, तोभी विश्वास नहीं करते।
36. ಆದರೆ--ನೀವು ನನ್ನನ್ನು ನೋಡಿಯೂ ನಂಬಲಿಲ್ಲ ಎಂದು ನಾನು ನಿಮಗೆ ಹೇಳಿದೆನು.
37. जो कुछ पिता मुझे देता है वह सब मेरे पास आएगा, उसे मैं कभी न निकालूंगा।
37. ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರು ವರು; ನನ್ನ ಬಳಿಗೆ ಬರುವವನನ್ನು ನಾನು ಹೊರಗೆ ತಳ್ಳಿಬಿಡುವದೇ ಇಲ್ಲ.
38. क्योंकि मैं अपनी इच्छा नहीं, बरन अपने भेजनेवाले की इच्छा पूरी करने के लिये स्वर्ग से उतरा हूं।
38. ನಾನು ನನ್ನ ಸ್ವಂತ ಚಿತ್ತವನ್ನಲ್ಲ; ಆದರೆ ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ಮಾಡುವದಕ್ಕೆ ಪರಲೋಕದಿಂದ ಬಂದೆನು.
39. और मेरे भेजनेवाले की इच्छा यह है कि जो कुछ उस ने मुझे दिया है, उस में से मैं कुछ न खोऊं परन्तु उसे अंतिम दिन फिर जिला उठाऊं।
39. ನನ್ನನ್ನು ಕಳುಹಿಸಿದ ತಂದೆಯ ಚಿತ್ತವೇನಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಒಬ್ಬನನ್ನೂ ಕಳಕೊಳ್ಳದೆ ಕಡೇ ದಿನದಲ್ಲಿ ಅವನನ್ನು ತಿರಿಗಿ ಎಬ್ಬಿಸುವದೇ.
40. क्योंकि मेरे पिता की इच्छा यह है, कि जो कोई पुत्रा को देखे, और उस पर विश्वास करे, वह अनन्त जीवन पाए; और मैं उसे अंतिम दिन फिर जिला उठाऊंगा।
40. ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು.
41. सो यहूदी उस पर कुड़कुड़ाने लगे, इसलिये कि उस ने कहा था; कि जो रोटी स्वर्ग से उतरी, वह मैं हूं।
41. ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಆತನು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗುಣುಗುಟ್ಟಿ--
42. और उन्हों ने कहा; क्या यह यूसुफ का पुत्रा यीशु नहीं, जिस के माता पिता को हम जानते हैं? तो वह क्योंकर कहता है कि मैं स्वर्ग से उतरा हूं।
42. ಇವನು ಯೋಸೇಫನ ಮಗನಾದ ಯೇಸು ಅಲ್ಲವೇ? ಇವನ ತಂದೆ ತಾಯಿ ಗಳನ್ನು ನಾವು ಬಲ್ಲೆವಲ್ಲವೇ? ಹಾಗಾದರೆ--ನಾನು ಪರಲೋಕದಿಂದ ಇಳಿದು ಬಂದೆನು ಎಂದು ಇವನು ಹೇಳುವದು ಹೇಗೆ ಅಂದರು.
43. यीशु ने उन को उत्तर दिया, कि आपस में मत कुड़कुड़ाओ।
43. ಯೇಸು ಪ್ರತ್ಯುತ್ತರ ವಾಗಿ ಅವರಿಗೆ--ನಿಮ್ಮ ನಿಮ್ಮೊಳಗೆ ಗುಣುಗುಟ್ಟ ಬೇಡಿರಿ.
44. कोई मेरे पास नहीं आ सकता, जब तक पिता, जिस ने मुझे भेजा है, उसे खींच न ले; और मैं उस को अंतिम दिन फिर जिला उठाऊंगा।
44. ನನ್ನನ್ನು ಕಳುಹಿಸಿದ ತಂದೆಯು ಎಳೆಯದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು.
45. भविष्यद्वक्ताओं के लेखों में यह लिखा है, कि वे सब परमेश्वर की ओर से सिखाए हुए होंगे। जिस किसी ने पिता से सुना और सीखा है, वह मेरे पास आता है।यशायाह 54:13
45. ಅವರೆಲ್ಲರು ದೇವರಿಂದ ಬೋಧಿಸಲ್ಪಡುವರೆಂದು ಪ್ರವಾದನೆಗಳಲ್ಲಿ ಬರೆಯಲ್ಪಟ್ಟಿದೆ. ಆದಕಾರಣ ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬ ಮನುಷ್ಯನು ನನ್ನ ಬಳಿಗೆ ಬರುತ್ತಾನೆ.
46. यह नहीं, कि किसी ने पिता को देखा परन्तु जो परमेश्वर की ओर से है, केवल उसी ने पिता को देखा है।
46. ದೇವರಿಗೆ ಸಂಬಂಧಪಟ್ಟ ವನೇ ತಂದೆಯನ್ನು ನೋಡಿದ್ದಾನೆ ಹೊರತು ಬೇರೆ ಯಾವನೂ ತಂದೆಯನ್ನು ನೋಡಲಿಲ್ಲ.
47. मैं तुम से सच सच कहता हूं, कि जो कोई विश्वास करता है, अनन्त जीवन उसी का है।
47. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನನ್ನ ಮೇಲೆ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ.
48. जीवन की रोटी मैं हूं।
48. ನಾನೇ ಆ ಜೀವದ ರೊಟ್ಟಿಯಾಗಿದ್ದೇನೆ.
49. तुम्हारे बापदादों ने जंगल में मन्ना खाया और मर गए।
49. ನಿಮ್ಮ ಪಿತೃಗಳು ಅಡವಿಯಲ್ಲಿ ಮನ್ನಾ ತಿಂದಾಗ್ಯೂ ಸತ್ತು ಹೋದರು.
50. यह वह रोटी है जो स्वर्ग से उतरती है ताकि मनुष्य उस में से खाए और न मरे।
50. ಮನುಷ್ಯನು ತಿಂದು ಸಾಯದೇ ಇರು ವಂತೆ ಪರಲೋಕದಿಂದ ಕೆಳಗೆ ಇಳಿದು ಬಂದ ರೊಟ್ಟಿ ಇದೇ.
51. जीवन की रोटी जो स्वर्ग से उतरी मैं हूं। यदि कोई इस रोटी में से खाए, तो सर्वदा जीवित रहेगा और जो रोटी मैं जगत के जीवन के लिये दूंगा, वह मेरा मांस है।
51. ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು.
52. इस पर यहूदी यह कहकर आपस में झगड़ने लगे, कि यह मनुष्य क्योंकर हमें अपना मांस खाने को दे सकता है?
52. ಇದರಿಂದ ಯೆಹೂದ್ಯರು ತಮ್ಮತಮ್ಮೊಳಗೆ ವಾಗ್ವಾದ ಮಾಡುತ್ತಾ--ಈ ಮನುಷ್ಯನು ತನ್ನ ಮಾಂಸ ವನ್ನು ತಿನ್ನುವದಕ್ಕೆ ನಮಗೆ ಹೇಗೆ ಕೊಡುತ್ತಾನೆ ಅಂದರು.
53. यीशु ने उन से कहा; मैं तुम से सच सच कहता हूं जब तक मनुष्य के पुत्रा का मांस न खाओ, और उसका लोहू न पीओ, तुम में जीवन नहीं।
53. ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ.
54. जो मेरा मांस खाता, और मेरा लोहू पीता हे, अनन्त जीवन उसी का है, और मैं अंतिम दिन फिर उसे जिला उठाऊंगा।
54. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು.
55. क्योंकि मेरा मांस वास्तव में खाने की वस्तु है और मेरा लोहू वास्तव में पीन की वस्तु है।
55. ಯಾಕಂದರೆ ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ.
56. जो मेरा मांस खाता और मेरा लोहू पीता है, वह मुझ में स्थिर बना रहता है, और मैं उस में।
56. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ.
57. जैसा जीवते पिता ने मुझे भेजा और मैं पिता के कारण जीवित हूं वैसा ही वह भी जो मुझे खाएगा मेरे कारण जीवित रहेगा।
57. ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿ ರಲಾಗಿ ನಾನು ತಂದೆಯ ಮೂಲಕ ಜೀವಿಸುವಂತೆಯೇ ನನ್ನನ್ನು ತಿನ್ನುವವನು ನನ್ನ ಮೂಲಕವಾಗಿಯೇ ಜೀವಿ ಸುವನು.
58. जो रोटी स्वर्ग से उतरी यही है, बापदादों के समान नहीं कि खाया, और मर गए: जो कोई यह रोटी खाएगा, वह सर्वदा जीवित रहेगा।
58. ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೆ; ನಿಮ್ಮ ಪಿತೃಗಳು ಮನ್ನಾ ತಿಂದಾಗ್ಯೂ ಸತ್ತುಹೋದಂತೆ ಅಲ್ಲ; ಆದರೆ ಈ ರೊಟ್ಟಿಯನ್ನು ತಿನ್ನುವವನು ಎಂದೆಂದಿಗೂ ಜೀವಿಸುವನು ಅಂದನು.
59. ये बातें उस ने कफरनहूम के एक आराधनालय में उपदेश देते समय कहीं।
59. ಕಪೆರ್ನೌಮಿನಲ್ಲಿ ಬೋಧಿಸುತ್ತಿರುವಾಗ ಸಭಾ ಮಂದಿರದಲ್ಲಿ ಆತನು ಇವುಗಳನ್ನು ಹೇಳಿದನು.
60. इसलिये उसके चेलों में से बहुतों ने यह सुनकर कहा, कि यह बात नागवार है; इसे कौन सुन सकता है?
60. ಆದದರಿಂದ ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ--ಇದು ಕಠಿಣವಾದ ಮಾತು; ಇದನ್ನು ಯಾರು ಕೇಳಾರು ಅಂದರು.
61. यीशु ने अपने मन में यह जान कर कि मेरे चेले आपस में इस बात पर कुड़कुड़ाते हैं, उन से पूछा, क्या इस बात से तुम्हें ठोकर लगती है?
61. ತನ್ನ ಶಿಷ್ಯರೂ ಇದಕ್ಕೆ ಗುಣು ಗುಟ್ಟುತ್ತಾರೆಂದು ಯೇಸು ತನ್ನಲ್ಲಿ ತಿಳಿದುಕೊಂಡು ಅವರಿಗೆ--ಇದು ನಿಮಗೆ ಅಭ್ಯಂತರವಾಯಿತೋ?
62. और यदि तुम मनुष्य के पुत्रा को जहां वह पहिले था, वहां ऊपर जाते देखोगे, तो क्या होगा?भजन संहिता 47:5
62. ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ?
63. आत्मा तो जीवनदायक है, शरीर से कुछ लाभ नहीं: जो बातें मैं ने तुम से कहीं हैं वे आत्मा है, और जीवन भी हैं।
63. ಬದುಕಿಸುವಂಥದ್ದು ಆತ್ಮವೇ; ಮಾಂಸವು ಯಾವದಕ್ಕೂ ಪ್ರಯೋಜನವಾಗುವದಿಲ್ಲ; ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ.
64. परन्तु तुम में से कितने ऐसे हैं जो विश्वास नहीं करते: क्योंकि यीशु तो पहिले ही से जानता था कि जो विश्वास नहीं करते, वे कौन हैं? और कौन मुझे पकड़वाएगा।
64. ಆದರೆ ನಂಬದವರು ಕೆಲವರು ನಿಮ್ಮಲ್ಲಿ ಇದ್ದಾರೆ ಅಂದನು. ಯಾಕಂದರೆ ನಂಬದವರು ಯಾರೆಂದೂ ತನ್ನನ್ನು ಹಿಡುಕೊಡು ವವನು ಯಾರೆಂದೂ ಮೊದಲಿನಿಂದಲೇ ಯೇಸು ತಿಳಿದಿದ್ದನು.
65. और उस ने कहा, इसी लिये मैं ने तुम से कहा था कि जब तक किसी को पिता की ओर यह बरदान न दिया जाए तक तक वह मेरे पास नहीं आ सकता।
65. ಆತನು--ನನ್ನ ತಂದೆಯಿಂದ ಒಬ್ಬನಿಗೆ ಕೊಡಲ್ಪಟ್ಟ ಹೊರತು ಯಾವನೂ ನನ್ನ ಬಳಿಗೆ ಬರ ಲಾರನು; ಇದಕ್ಕೋಸ್ಕರವೇ ನಾನು ನಿಮಗೆ ಹೇಳಿದೆನು ಅಂದನು.
66. इस पर उसके चेलों में से बहुतेरे उल्टे फिर गए और उसके बाद उसके साथ न चले।
66. ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟುಹೋಗಿ ಮತ್ತೆ ಅವರು ಆತನ ಸಂಗಡ ಎಂದಿಗೂ ಸಂಚರಿಸಲೇ ಇಲ್ಲ.
67. तब यीशु ने उन बारहों से कहा, क्या तुम भी चले जाना चाहते हो?
67. ಆಗ ಯೇಸು ಹನ್ನೆ ರಡು ಮಂದಿಗೆ--ನೀವು ಸಹ ಹೊರಟು ಹೋಗಬೇಕೆಂ ದಿದ್ದೀರೋ ಎಂದು ಕೇಳಲು
68. शमौन पतरस ने उस को उत्तर दिया, कि हे प्रभु हम किस के पास जाएं? अनन्त जीवन की बातें तो तेरे ही पास हैं।
68. ಸೀಮೋನ್ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನಾವು ಯಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವದ ವಾಕ್ಯಗಳು ಉಂಟಲ್ಲಾ.
69. और हम ने विश्वास किया, और जान गए हैं, कि परमेश्वर का पवित्रा जन तू ही है।
69. ನೀನು ಜೀವವುಳ್ಳ ದೇವರಮಗನಾದ ಆ ಕ್ರಿಸ್ತನೆಂದು ನಾವು ಖಂಡಿತವಾಗಿ ನಂಬಿದ್ದೇವೆ ಅಂದನು.
70. यीशु ने उन्हें उत्तर दिया, क्या मैं ने तुम बारहों को नहीं चुन लिया? तौभी तुम में से एक व्यक्ति शैतान है।
70. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿ ಕೊಂಡೆನಲ್ಲವೇ? ಆದರೆ ನಿಮ್ಮಲ್ಲಿ ಒಬ್ಬನು ಸೈತಾನನಾ ಗಿದ್ದಾನೆ ಅಂದನು.ಸೀಮೋನನ ಮಗನಾದ ಇಸ್ಕರಿಯೋತ್ ಯೂದನ ವಿಷಯವಾಗಿ ಆತನು ಹೇಳಿ ದನು. ಯಾಕಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಇವನು ಆತನನ್ನು ಹಿಡುಕೊಡುವದಕ್ಕಿದ್ದನು.
71. यह उस ने शमौन इस्करियोती के पुत्रा यहूदाह के विषय में कहा, क्योंकि यही जो उन बारहों में से था, उसे पकड़वाने को था।।
71. ಸೀಮೋನನ ಮಗನಾದ ಇಸ್ಕರಿಯೋತ್ ಯೂದನ ವಿಷಯವಾಗಿ ಆತನು ಹೇಳಿ ದನು. ಯಾಕಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಇವನು ಆತನನ್ನು ಹಿಡುಕೊಡುವದಕ್ಕಿದ್ದನು.