Turn Off
21st Century KJV
A Conservative Version
American King James Version (1999)
American Standard Version (1901)
Amplified Bible (1965)
Apostles' Bible Complete (2004)
Bengali Bible
Bible in Basic English (1964)
Bishop's Bible
Complementary English Version (1995)
Coverdale Bible (1535)
Easy to Read Revised Version (2005)
English Jubilee 2000 Bible (2000)
English Lo Parishuddha Grandham
English Standard Version (2001)
Geneva Bible (1599)
Hebrew Names Version
Hindi Bible
Holman Christian Standard Bible (2004)
Holy Bible Revised Version (1885)
Kannada Bible
King James Version (1769)
Literal Translation of Holy Bible (2000)
Malayalam Bible
Modern King James Version (1962)
New American Bible
New American Standard Bible (1995)
New Century Version (1991)
New English Translation (2005)
New International Reader's Version (1998)
New International Version (1984) (US)
New International Version (UK)
New King James Version (1982)
New Life Version (1969)
New Living Translation (1996)
New Revised Standard Version (1989)
Restored Name KJV
Revised Standard Version (1952)
Revised Version (1881-1885)
Revised Webster Update (1995)
Rotherhams Emphasized Bible (1902)
Tamil Bible
Telugu Bible (BSI)
Telugu Bible (WBTC)
The Complete Jewish Bible (1998)
The Darby Bible (1890)
The Douay-Rheims American Bible (1899)
The Message Bible (2002)
The New Jerusalem Bible
The Webster Bible (1833)
Third Millennium Bible (1998)
Today's English Version (Good News Bible) (1992)
Today's New International Version (2005)
Tyndale Bible (1534)
Tyndale-Rogers-Coverdale-Cranmer Bible (1537)
Updated Bible (2006)
Voice In Wilderness (2006)
World English Bible
Wycliffe Bible (1395)
Young's Literal Translation (1898)
Cross Reference Bible
1. सो यहोवा ने जैसा कहा था वैसा ही सारा की सुधि लेके उसके साथ अपने वचन के अनुसार किया।
1. ಕರ್ತನು ತಾನು ಹೇಳಿದ ಹಾಗೆ ಸಾರಳನ್ನು ದರ್ಶಿಸಿ ತಾನು ಹೇಳಿದಂತೆ ಸಾರಳಿಗೆ ಮಾಡಿದನು.
2. सो सारा को इब्राहीम से गर्भवती होकर उसके बुढ़ापे में उसी नियुक्त समय पर जो परमेश्वर ने उस से ठहराया था एक पुत्रा उत्पन्न हुआ।गलातियों 4:22, इब्रानियों 11:11
2. ದೇವರು ಅಬ್ರಹಾಮನಿಗೆ ಮುಂತಿ ಳಿಸಿದ ಹಾಗೆ ಸಾರಳು ಗರ್ಭಿಣಿಯಾಗಿ ಅವನು ಮುದುಕನಾಗಿದ್ದಾಗ ಅವನಿಗೆ ಮಗನನ್ನು ಹೆತ್ತಳು.
3. और इब्राहीम ने अपने पुत्रा का नाम जो सारा से उत्पन्न हुआ था इसहाक रखा।मत्ती 1:2, लूका 3:34
3. ಅಬ್ರಹಾಮನು ತನಗೆ ಸಾರಳಲ್ಲಿ ಹುಟ್ಟಿದ ಮಗನಿಗೆ ಇಸಾಕನೆಂದು ಹೆಸರಿಟ್ಟನು.
4. और जब उसका पुत्रा इसहाक आठ दिन का हुआ, तब उस ने परमेश्वर की आज्ञा के अनुसार उसक खतना किया।प्रेरितों के काम 7:8
4. ದೇವರು ತನಗೆ ಅಪ್ಪಣೆಕೊಟ್ಟ ಹಾಗೆ ಅಬ್ರಹಾಮನು ತನ್ನ ಮಗನಾದ ಇಸಾಕನಿಗೆ ಎಂಟನೆಯ ದಿನದಲ್ಲಿ ಸುನ್ನತಿಮಾಡಿದನು.
5. और जब इब्राहीम का पुत्रा इसहाक उत्पन्न हुआ तब वह एक सौ वर्ष का था।
5. ಅಬ್ರಹಾಮನ ಮಗನಾದ ಇಸಾಕನು ಅವನಿಗೆ ಹುಟ್ಟಿದಾಗ ಅವನು ನೂರು ವರುಷದವನಾಗಿದ್ದನು.
6. और सारा ने कहा, परमेश्वर ने मुझे प्रफुल्लित कर दिया है; इसलिये सब सुननेवाले भी मेरे साथ प्रफुल्लित होंगे।
6. ಆಗ ಸಾರಳು--ದೇವರು ನನ್ನನ್ನು ನಗುವಂತೆ ಮಾಡಿದ್ದಾನೆ. ಹೀಗೆ ಕೇಳುವವರೆಲ್ಲರೂ ನನ್ನೊಂದಿಗೆ ನಗುವರು ಎಂದು ಹೇಳಿ--
7. फिर उस ने यह भी कहा, कि क्या कोई कभी इब्राहीम से कह सकता था, कि सारा लड़कों को दूध पिलाएगी ? पर देखो, मुझ से उसके बुढ़ापे में एक पुत्रा उत्पन्न हुआ।
7. ಸಾರಳು ಮಕ್ಕಳಿಗೆ ಮೊಲೆ ಕುಡಿಸುವಳೆಂದು ಅಬ್ರಹಾಮನಿಗೆ ಯಾರಾ ದರೂ ಹೇಳುತ್ತಿದ್ದರೋ? ಆದರೂ ನಾನು ಅವನಿಗೆ ಮುದಿಪ್ರಾಯದಲ್ಲಿ ಮಗನನ್ನು ಹೆತ್ತೆನು ಅಂದಳು.
8. और वह लड़का बढ़ा और उसका दूध छुड़ाया गया : और इसहाक के दूध छुड़ाने के दिन इब्राहीम ने बड़ी जेवनार की।
8. ಆ ಮಗುವು ಬೆಳೆದು ಮೊಲೆ ಬಿಟ್ಟಿತು; ಇಸಾಕನನ್ನು ಮೊಲೆ ಬಿಡಿಸಿದ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣವನ್ನು ಮಾಡಿಸಿದನು.
9. तब सारा को मिद्दी हाजिरा का पुत्रा, जो इब्राहीम से उत्पन्न हुआ था, हंसी करता हुआ देख पड़ा।गलातियों 4:29
9. ಇದಲ್ಲದೆ ಐಗುಪ್ತ್ಯ ಳಾದ ಹಾಗರಳು ಅಬ್ರಹಾಮನಿಗೆ ಹೆತ್ತಿದ್ದ ಮಗನು ಹಾಸ್ಯಮಾಡುವದನ್ನು ಸಾರಳು ನೋಡಿ
10. सो इस कारण उस ने इब्राहीम से कहा, इस दासी को पुत्रा सहित बरबस निकाल दे : क्योंकि इस दासी का पुत्रा मेरे पुत्रा इसहाक के साथ भागी न होगा।गलातियों 4:30
10. ಅಬ್ರ ಹಾಮನಿಗೆ--ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನ ಸಂಗಡ ಬಾಧ್ಯನಾಗಬಾರದು ಅಂದಳು.
11. यह बात इब्राहीम को अपने पुत्रा के कारण बुरी लगी।
11. ಈ ಮಾತು ಅಬ್ರಹಾಮನಿಗೆ ಅವನ ಮಗನ ದೆಸೆಯಿಂದ ಬಹು ದುಃಖಕರವಾಗಿ ತೋಚಿತು.
12. तब परमेश्वर ने इब्राहीम से कहा, उस लड़के और अपनी दासी के कारण तुझे बुरा न लगे; जो बात सारा तुझ से कहे, उसे मान, क्योंकि जो तेरा वंश कहलाएगा सो इसहाक ही से चलेगा।इब्रानियों 11:18, मत्ती 1:2, रोमियों 9:7
12. ಆಗ ದೇವರು ಅಬ್ರಹಾಮನಿಗೆ--ಹುಡುಗನ ಮತ್ತು ದಾಸಿಯ ದೆಸೆಯಿಂದ ನಿನಗೆ ವ್ಯಥೆಯಾಗದೆ ಇರಲಿ; ಸಾರಳು ನಿನಗೆ ಹೇಳಿದ್ದೆಲ್ಲವನ್ನು ಕೇಳು; ಯಾಕಂದರೆ ಇಸಾಕನಲ್ಲಿ ನಿನ್ನ ಸಂತತಿಯು ಕರೆಯಲ್ಪ ಡುವದು.
13. दासी के पुत्रा से भी मैं एक जाति उत्पन्न करूंगा इसलिये कि वह तेरा वंश है।
13. ದಾಸಿಯ ಮಗನು ಸಹ ನಿನ್ನ ಸಂತಾನವಾಗಿರುವದರಿಂದ ಅವನನ್ನು ನಾನು ಜನಾಂಗ ವಾಗ ಮಾಡುವೆನು ಅಂದನು.
14. सो इब्राहीम ने बिहान को तड़के उठकर रोटी और पानी से भरी चमड़े की थैली भी हाजिरा को दी, और उसके कन्धे पर रखी, और उसके लड़के को भी उसे देकर उसको विदा किया : सो वह चली गई, और बेर्शेबा के जंगल में भ्रमण करने लगी।
14. ಅಬ್ರಹಾಮನು ಬೆಳಿಗ್ಗೆ ಎದ್ದು ರೊಟ್ಟಿಯನ್ನೂ ನೀರಿನ ತಿತ್ತಿಯನ್ನೂ ತೆಗೆದುಕೊಂಡು ಹಾಗರಳಿಗೆ ಕೊಟ್ಟು ಅವುಗಳನ್ನು ಆಕೆಯ ಹೆಗಲಿನ ಮೇಲೆ ಇರಿಸಿ ಆ ಹುಡುಗನ ಸಂಗಡ ಅವಳನ್ನು ಕಳುಹಿಸಿಬಿಟ್ಟನು. ಆಕೆಯು ಹೋಗಿ ಬೇರ್ಷೆಬದ ಕಾಡಿನಲ್ಲಿ ಅಲೆದಾಡುವವ ಳಾದಳು.
15. जब थैली का जल चुक गया, तब उस ने लड़के को एक झाड़ी के नीचे छोड़ दिया।
15. ತಿತ್ತಿಯೊಳಗಿನ ನೀರು ಮುಗಿದಾಗ ಆಕೆಯು ಮಗುವನ್ನು ಗಿಡಗಳಲ್ಲಿ ಒಂದರ ಕೆಳಗೆ ಮಲಗಿಸಿ
16. और आप उस से तीर भर के टप्पे पर दूर जाकर उसके साम्हने यह सोचकर बैठ गई, कि मुझ को लड़के की मृत्यु देखनी न पड़े। तब वह उसके साम्हने बैठी हुई चिल्ला चिल्ला के रोने लगी।
16. ಬಿಲ್ಲೆಸೆಯುವಷ್ಟು ದೂರ ಹೋಗಿ ಅವನಿಗೆ ಎದುರಾಗಿ ಕೂತುಕೊಂಡು--ಮಗುವಿನ ಸಾವನ್ನು ನಾನು ನೋಡಲಾರೆನು ಎಂದು ಹೇಳಿ ಆಕೆಯು ತನ್ನ ಸ್ವರವೆತ್ತಿ ಅತ್ತಳು.
17. और परमेश्वर ने उस लड़के की सुनी; और उसके दूत ने स्वर्ग से हाजिरा को पुकार के कहा, हे हाजिरा तुझे क्या हुआ ? मत डर; क्योंकि जहां तेरा लड़का है वहां से उसकी आवाज परमेश्वर को सुन पड़ी है।
17. ಆಗ ದೇವರು ಆ ಹುಡುಗನ ಸ್ವರವನ್ನು ಕೇಳಿದನು. ಆಗ ದೇವದೂತನು ಆಕಾಶದೊಳಗಿಂದ ಹಾಗರಳನ್ನು ಕರೆದು ಆಕೆಗೆ--ಹಾಗರಳೇ, ನಿನ್ನ ವ್ಯಥೆಯೇನು? ಅಂಜಬೇಡ; ದೇವರು ಹುಡುಗನ ಸ್ವರವನ್ನು ಅವನು ಇದ್ದಲ್ಲಿಂದ ಕೇಳಿದ್ದಾನೆ.
18. उठ, अपने लड़के को उठा और अपने हाथ से सम्भाल क्योंकि मैं उसके द्वारा एक बड़ी जाति बनाऊंगा।
18. ಎದ್ದು ಹುಡುಗನನ್ನು ಎತ್ತಿಕೊಂಡು ಅವನನ್ನು ನಿನ್ನ ಕೈಯಲ್ಲಿ ತಕ್ಕೋ; ನಾನು ಅವನನ್ನು ದೊಡ್ಡ ಜನಾಂಗವಾಗ ಮಾಡುವೆನು ಅಂದನು.
19. परमेश्वर ने उसकी आंखे खोल दी, और उसको एक कुंआ दिखाई पड़ा; सो उस ने जाकर थैली को जल से भरकर लड़के को पिलाया।
19. ಆಗ ದೇವರು ಆಕೆಯ ಕಣ್ಣುಗಳನ್ನು ತೆರೆದನು; ಆಕೆಯು ನೀರಿನ ಬಾವಿಯನ್ನು ನೋಡಿ ತಿತ್ತಿಯಲ್ಲಿ ನೀರನ್ನು ತುಂಬಿಸಿ ಹುಡುಗನಿಗೆ ಕುಡಿಯಲು ಕೊಟ್ಟಳು.
20. और परमेश्वर उस लड़के के साथ रहा; और जब वह बड़ा हुआ, तब जंगल में रहते रहते धनुर्धारी बन गया।
20. ದೇವರು ಆ ಹುಡುಗನ ಸಂಗಡ ಇದ್ದನು. ಅವನು ಬೆಳೆದು ಅರಣ್ಯದಲ್ಲಿ ವಾಸಮಾಡಿ ಬಿಲ್ಲುಗಾರ ನಾದನು.
21. वह तो पारान नाम जंगल में रहा करता था : और उसकी माता ने उसके लिये मि देश से एक स्त्री मंगवाई।।
21. ಅವನು ಪಾರಾನಿನ ಅರಣ್ಯದಲ್ಲಿ ವಾಸಮಾಡಿದನು. ಅವನ ತಾಯಿಯು ಅವನಿಗೋಸ್ಕರ ಐಗುಪ್ತದೇಶದಿಂದ ಹೆಂಡತಿಯನ್ನು ತಕ್ಕೊಂಡಳು.
22. उन दिनों में ऐसा हुआ कि अबीमेलेक अपने सेनापति पीकोल को संग लेकर इब्राहीम से कहने लगा, जो कुछ तू करता है उस में परमेश्वर तेरे संग रहता है :
22. ಆ ಕಾಲದಲ್ಲಿ ಅಬೀಮೆಲೆಕನೂ ಅವನ ಮುಖ್ಯ ಸೈನ್ಯಾಧಿಪತಿಯಾದ ಫೀಕೋಲನೂ ಅಬ್ರಹಾಮ ನಿಗೆ--ನೀನು ಮಾಡುವದೆಲ್ಲದರಲ್ಲಿ ದೇವರು ನಿನ್ನ ಸಂಗಡ ಇದ್ದಾನೆ.
23. सो अब मुझ से यहां इस विषय में परमेश्वर की किरिया खा, कि तू न तो मुझ से छल करेगा, और न कभी मेरे वंश से करेगा, परन्तु जैसी करूणा मैं ने तुझ पर की है, वैसी ही तू मुझ पर और इस देश पर भी जिस में तू रहता है करेगा
23. ಆದದರಿಂದ ನನಗೂ ನನ್ನ ಮಗನಿಗೂ ನನ್ನ ಮೊಮ್ಮಗನಿಗೂ ವಂಚನೆಮಾಡುವ ದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣ ಮಾಡು. ನಾನು ನಿನಗೆ ಮಾಡಿದ ಪ್ರಕಾರ ನೀನು ನನಗೂ ನೀನು ಪ್ರವಾಸವಾಗಿರುವ ದೇಶಕ್ಕೂ ಮಾಡ ಬೇಕು ಅಂದನು.
24. इब्राहीम ने कहा, मैं किरिया खाऊंगा।
24. ಅದಕ್ಕೆ ಅಬ್ರಹಾಮನು-- ನಾನು ಪ್ರಮಾಣಮಾಡುತ್ತೇನೆ ಅಂದನು.
25. और इब्राहीम ने अबीमेलेक को एक कुएं के विषय में, जो अबीमेलेक के दासों ने बरीयाई से ले लिया था, उलाहना दिया।
25. ಅಬೀ ಮೆಲೆಕನ ಸೇವಕರು ಬಲಾತ್ಕಾರದಿಂದ ತಕ್ಕೊಂಡ ನೀರಿನ ಬಾವಿಗಾಗಿ ಅಬ್ರಹಾಮನು ಅಬೀಮೆಲೆಕನನ್ನು ಗದರಿಸಿದಾಗ
26. तब अबीमेलेक ने कहा, मै नहीं जानता कि किस ने यह काम किया : और तू ने भी मुझे नहीं बताया, और न मै ने आज से पहिले इसके विषय में कुछ सुना।
26. ಅಬೀಮೆಲೆಕನು--ಈ ಕೆಲಸವನ್ನು ಯಾರು ಮಾಡಿದರೆಂದು ನಾನು ಅರಿಯೆನು; ನೀನೂ ನನಗೆ ತಿಳಿಸಲಿಲ್ಲ; ನಾನು ಇಂದಿನ ವರೆಗೆ ಅದನ್ನು ಕೇಳಲೂ ಇಲ್ಲ ಅಂದನು.
27. तक इब्राहीम ने भेड़- बकरी, और गाय- बैल लेकर अबीमेलेक को दिए; और उन दोनों ने आपस में वाचा बान्धी।
27. ಆಗ ಅಬ್ರಹಾಮನು ಕುರಿಎತ್ತುಗಳನ್ನು ತೆಗೆದುಕೊಂಡು ಅಬೀಮೆಲೆಕನಿಗೆ ಕೊಟ್ಟನು; ಆಗ ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು.
28. और इब्राहीम ने भेड़ की सात बच्ची अलग कर रखीं।
28. ಅಬ್ರಹಾಮನು ಹಿಂಡಿನ ಏಳು ಹೆಣ್ಣು ಕುರಿಮರಿಗಳನ್ನು ಬೇರೆಮಾಡಿ ನಿಲ್ಲಿಸಿದನು.
29. तब अबीमेलेक ने इब्राहीम से पूछा, इन सात बच्चियों का, जो तू ने अलग कर रखी हैं, क्या प्रयोजन है ?
29. ಅಬೀಮೆಲೆಕನು ಅಬ್ರಹಾಮನಿಗೆ--ನೀನು ಯಾಕೆ ಈ ಏಳು ಹೆಣ್ಣು ಕುರಿಮರಿಗಳನ್ನು ಬೇರೆ ನಿಲ್ಲಿಸಿದ್ದೀ ಅಂದನು.
30. उस ने कहा, तू इन सात बच्चियों को इस बात की साक्षी जानकर मेरे हाथ से ले, कि मै ने कुंआ खोदा है।
30. ಅದಕ್ಕೆ ಅಬ್ರಹಾಮನುನಾನೇ ಈ ಬಾವಿಯನ್ನು ತೊಡಿಸಿದ್ದೇನೆಂಬದಕ್ಕೆ ಸಾಕ್ಷಿಗಾಗಿ ಈ ಏಳು ಹೆಣ್ಣು ಕುರಿಮರಿಗಳನ್ನು ನೀನು ನನ್ನ ಕೈಯಿಂದ ತೆಗೆದುಕೊಳ್ಳಬೇಕು ಅಂದನು.
31. उन दोनों ने जो उस स्थान में आपस में किरिया खाई, इसी कारण उसका नाम बेर्शेबा पड़ा।
31. ಹೀಗೆ ಅವರಿಬ್ಬರೂ ಅಲ್ಲಿ ಪ್ರಮಾಣಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ ಎಂದು ಅವನು ಹೆಸರಿಟ್ಟನು.
32. जब उन्हों ने बेर्शेबा में परस्पर वाचा बान्धी, तब अबीमेलेक, और उसका सेनापति पीकोल उठकर पलिश्तियों के देश में लौट गए।
32. ಹೀಗೆ ಅವರು ಬೇರ್ಷೆಬದಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡರು. ತರುವಾಯ ಅಬೀಮೆಲೆಕನೂ ಅವನ ಮುಖ್ಯ ಸೈನ್ಯಾಧಿ ಪತಿಯಾದ ಫೀಕೋಲನೂ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂತಿರುಗಿದರು.
33. और इब्राहीम ने बेर्शेबा में झाऊ का एक वृक्ष लगाया, और वहां यहोवा, जो सनातन ईश्वर है, उस से प्रार्थना की।
33. ಆಗ ಅಬ್ರಹಾಮನು ಬೇರ್ಷೆಬದಲ್ಲಿ ತೋಪನ್ನು ನೆಟ್ಟು (ಪಿಚುಲ ವೃಕ್ಷ) ನಿತ್ಯದೇವರಾದ ಕರ್ತನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹು ದಿವಸ ಪ್ರವಾಸಿಯಾಗಿದ್ದನು.
34. और इब्राहीम पलिश्तियों के देश में बहुत दिनों तक परदेशी होकर रहा।।
34. ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹು ದಿವಸ ಪ್ರವಾಸಿಯಾಗಿದ್ದನು.