1 Samuel - 1 शमूएल 17 | View All

1. अब पलिश्तियों ने युद्ध के लिये अपनी सेनाओं को इकट्ठा किया; और यहूदा देश के सोको में एक साथ होकर सोको और अजेका के बीच एपेसदम्मीम में डेरे डाले।

1. ಫಿಲಿಷ್ಟಿಯರು ಯುದ್ಧಮಾಡುವದಕ್ಕೆ ತಮ್ಮ ಸೈನ್ಯವನ್ನು ಯೆಹೂದ ದೇಶದ ಸೋಕೋ ವಿನಲ್ಲಿ ಕೂಡಿಸಿ ಅಜೇಕಕ್ಕೂ ಸೋಕೋವಿಗೂ ಮಧ್ಯ ದಲ್ಲಿ ಎಫೆಸ್ದವ್ಮೆಾಮಿನಲ್ಲಿ ದಂಡಿಳಿದರು.

2. और शाऊल और इस्राएली पुरूषों ने भी इकट्ठे होकर एला नाम तराई में डेरे डाले, और युद्ध के लिये पलिश्तियों के विरूद्ध पांती बान्धी।

2. ಹಾಗೆಯೇ ಸೌಲನೂ ಇಸ್ರಾಯೇಲ್ ಮನುಷ್ಯರೂ ಕೂಡಿ ಕೊಂಡು ಏಲಾ ತಗ್ಗಿನ ಬಳಿಯಲ್ಲಿ ದಂಡಿಳಿದು ಫಿಲಿಷ್ಟಿ ಯರಿಗೆ ಎದುರಾಗಿ ಯುದ್ಧಮಾಡಲು ವ್ಯೂಹ ಕಟ್ಟಿದರು.

3. पलिश्ती तो एक ओर के पहाड़ पर और इस्राएली दूसरी ओर के पहाड़ पर और इस्राएली दूसरी ओर के पहाड़ पर खड़े रहे; और दोनों के बीच तराई थी।

3. ಫಿಲಿಷ್ಟಿಯರು ಒಂದು ಕಡೆಯಾಗಿ ಪರ್ವತದ ಬಳಿ ಯಲ್ಲಿಯೂ ಇಸ್ರಾಯೇಲ್ಯರು ಒಂದು ಕಡೆಯಾಗಿ ಪರ್ವತದ ಬಳಿಯಲ್ಲಿಯೂ ನಿಂತರು, ಅವರ ಮಧ್ಯದಲ್ಲಿ ತಗ್ಗು ಇತ್ತು.

4. तब पलिश्तियों की छावनी में से एक वीर गोलियत नाम निकला, जो गत नगर का था, और उसके डील की लम्बाई छ: हाथ एक बित्ता थी।

4. ಆದರೆ ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಹೆಸರುಳ್ಳ ಒಬ್ಬನು ಫಿಲಿಷ್ಟಿಯರ ದಂಡಿನಿಂದ ಹೊರಟನು.

5. उसके सिर पर पीतल का टोप था; और वह एक पत्तर का झिलम पहिने हुए था, जिसका तौल पांच हजार शेकेल पीतल का था।

5. ಅವನು ಆರುವರೆ ಮೊಳ ಎತ್ತರ, ಅವನ ತಲೆಯ ಮೇಲೆ ಹಿತ್ತಾಳೆಯ ಶಿರಸ್ತ್ರಾಣ ಇತ್ತು, ಯುದ್ಧಕವಚವನ್ನು ತೊಟ್ಟುಕೊಂಡಿದ್ದನು. ಯುದ್ಧಕವಚದ ಹಿತ್ತಾಳೆಯು ಐದು ಸಾವಿರ ಶೇಕೆಲು ತೂಕವಾಗಿತ್ತು.

6. उसकी टांगों पर पीतल के कवच थे, और उस से कन्धों के बीच बरछी बन्धी थी।

6. ಅವನ ಕಾಲು ಗಳಲ್ಲಿ ಹಿತ್ತಾಳೆಯ ಚಮ್ಮಳಿಗೆ, ಅವನ ತೋಳುಗಳ ಮಧ್ಯದಲ್ಲಿ ಬರ್ಜಿ ಇತ್ತು.

7. उसके भाले की छड़ जुलाहे के डोंगी के समान थी, और उस भाले का फल छ: सौ शेकेल लोहे का था, और बड़ी ढाल लिए हुए एक जन उसके आगे आगे चलता था

7. ಅವನ ಈಟಿಯ ಕೋಲು ನೇಯಿಗಾರನ ಕುಂಟೆಯಷ್ಟು ಗಾತ್ರವಿತ್ತು. ಅವನ ಕಬ್ಬಿಣದ ಈಟಿಯ ಅಲಗು ಆರುನೂರು ಶೇಕೆಲು ತೂಕವಾಗಿತ್ತು.

8. वह खड़ा होकर इस्राएली पांतियों को ललकार के बोला, तुम ने यहां आकर लड़ाई के लिये क्यों पांति बान्धी है? क्या मैं पलिश्ती नहीं हूं, और तुम शाऊल के अधीन नहीं हो? अपने में से एक पुरूष चुना, कि वह मेरे पास उत्तर आए।

8. ಇದಲ್ಲದೆ ಖೇಡ್ಯ ಹಿಡಿಯುವವನು ಅವನ ಮುಂದೆ ನಡೆದನು. ಅವನು ನಿಂತು ಇಸ್ರಾ ಯೇಲ್ ಸೈನ್ಯದವರಿಗೆ ಕೂಗಿ ಹೇಳಿದ್ದೇನಂದರೆ--ಯಾಕೆ ನೀವು ವ್ಯೂಹ ಕಟ್ಟಲು ಹೊರಟಿರಿ? ನಾನು ಫಿಲಿಷ್ಟಿಯನಲ್ಲವೋ? ನೀವು ಸೌಲನ ಸೇವಕರ ಲ್ಲವೋ? ನೀವು ನಿಮಗೋಸ್ಕರ ಒಬ್ಬನನ್ನು ಆದು ಕೊಳ್ಳಿರಿ; ಅವನು ನನ್ನ ಮುಂದೆ ಬರಲಿ.

9. यदि वह मुझ से लड़कर मुझे मार सके, तब तो हम तुम्हारे अधीन हो जाएंगे; परन्तु यदि मैं उस पर प्रबल होकर मांरू, तो तुम को हमारे अधीन होकर हमारी सेवा करनी पड़ेगी।

9. ಅವನು ನನ್ನ ಸಂಗಡ ಯುದ್ಧ ಮಾಡಬಲ್ಲವನಾಗಿದ್ದು ನನ್ನನ್ನು ಕೊಂದರೆ ನಾವು ನಿಮಗೆ ಸೇವಕರಾಗಿರುವೆವು; ನಾನು ಅವನ ಸಂಗಡ ಯುದ್ಧಮಾಡಬಲ್ಲವನಾಗಿದ್ದು ಅವನನ್ನು ಕೊಂದರೆ ನೀವು ನಮಗೆ ಸೇವಕರಾಗಿದ್ದು ನಮ್ಮನ್ನು ಸೇವಿಸಬೇಕು ಅಂದನು.

10. फिर वह पलिश्ती बोला, मैं आज के दिन इस्राएली पांतियों को ललकारता हूं, किसी पुरूष को मेरे पास भेजो, कि हम एक दूसरे से लड़ें।

10. ಆ ಫಿಲಿಷ್ಟಿಯನು--ನಾನು ಈ ದಿನ ಇಸ್ರಾಯೇಲಿನ ಸೈನ್ಯಗಳನ್ನು ನಿಂದಿಸುತ್ತೇನೆ; ನಾವು ಒಬ್ಬರಿಗೊಬ್ಬರು ಯುದ್ಧಮಾಡುವ ಹಾಗೆ ನನಗೆ ಒಬ್ಬನನ್ನು ಬಿಟ್ಟುಬಿಡಿರಿ ಅಂದನು.

11. उस पलिश्ती की इन बातों को सुनकर शाऊल और समस्त इस्राएलियों का मन कच्च हो गया, और वे अत्यन्त डर गए।।

11. ಸೌಲನೂ ಸಮಸ್ತ ಇಸ್ರಾಯೇಲ್ಯರೂ ಆ ಫಿಲಿಷ್ಟಿಯನ ಮಾತುಗಳನ್ನು ಕೇಳಿದಾಗ ಎದೆಗುಂದಿ ಬಹು ಭಯಪಟ್ಟರು.

12. दाऊद तो यहूदा के बेतलेहेम के उस एप्राती पुरूष को पुत्रा था, जिसका नाम यिशै था, और उसके आठ पुत्रा थे और वह पुरूष शाऊल के दिनों में बूढ़ा और निर्बल हो गया था।

12. ದಾವೀದನು ಯೆಹೂದದ ಬೇತ್ಲೆಹೇಮ್ ಊರಿನ ಎಫ್ರಾತ್ಯನಾದ ಇಷಯನೆಂಬವನ ಮಗನಾ ಗಿದ್ದನು. ಈ ಇಷಯನಿಗೆ ಎಂಟು ಮಂದಿ ಕುಮಾರ ರಿದ್ದರು. ಇವನು ಸೌಲನ ದಿವಸಗಳಲ್ಲಿ ಜನರೊಳಗೆ ವೃದ್ಧನಾಗಿದ್ದನು.

13. यिशै के तीन बड़े पुत्रा शाऊल के पीछे होकर लड़ने को गए थे; और उसके तीन पुत्रों के नाम जो लड़ने को गए थे ये थे, अर्थात् ज्येश्ठ का नाम एलीआब, दूसरे का अबीनादाब, और तीसरे का शम्मा था।

13. ಇಷಯನ ಮೂವರು ಹಿರೀ ಕುಮಾರರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು. ಯುದ್ಧಕ್ಕೆ ಹೋದ ಆ ಮೂವರು ಕುಮಾರರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬನು; ಎರಡನೆ ಯವನ ಹೆಸರು ಅಬೀನಾದಾಬನು, ಮೂರನೆಯವನ ಹೆಸರು ಶಮ್ಮನು.

14. और सब से छोटा दाऊद था; और तीनों बड़े पुत्रा शाऊल के पीछे होकर गए थे,

14. ಆದರೆ ದಾವೀದನು ಚಿಕ್ಕವನಾ ಗಿದ್ದನು. ಹಿರಿಯರಾದ ಆ ಮೂವರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು.

15. और दाऊद बेतलहेम में अपने पिता की भेड़ बकरियां चराने को शाऊल के पास से आया जाया करता था।।

15. ದಾವೀದನು ಸೌಲನನ್ನು ಬಿಟ್ಟು ಬೇತ್ಲೆಹೇಮಿಗೆ ತನ್ನ ತಂದೆಯ ಕುರಿಗಳನ್ನು ಮೇಯಿಸಲು ಹೋಗಿದ್ದನು.

16. वह पलिश्ती तो चालीस दिन तक सवेरे और सांझ को निकट आकर खड़ा हुआ करता था।

16. ಫಿಲಿಷ್ಟಿಯನು ಉದ ಯದಲ್ಲಿಯೂ ಸಾಯಂಕಾಲದಲ್ಲಿಯೂ ಬಂದು ನಾಲ್ವತ್ತು ದಿವಸ ನಿಂತುಕೊಳ್ಳುತ್ತಿದ್ದನು.

17. और यिशै ने अपने पुत्रा दाऊद से कहा, यह एपा भर चबैना, और ये दस रोटियां लेकर छावनी में अपने भाइयों के पास दौड़ जा;

17. ಇಷಯನು ತನ್ನ ಮಗನಾದ ದಾವೀದನಿಗೆನಿನ್ನ ಸಹೋದರರಿಗೋಸ್ಕರ ಒಂದು ಏಫದ ಹುರಿದ ಧಾನ್ಯವನ್ನೂ ಈ ಹತ್ತು ರೊಟ್ಟಿಗಳನ್ನೂ ತಕ್ಕೊಂಡು ದಂಡಿನಲ್ಲಿರುವ ನಿನ್ನ ಸಹೋದರರ ಬಳಿಗೆ ಓಡಿ ಹೋಗು.

18. और पनीर की ये दस टिकियां उनके सह पति के लिये ले जा। और अपने भाइयों का कुशल देखकर उन की कोई चिन्हानी ले आना।

18. ಇದಲ್ಲದೆ ಈ ಹತ್ತು ಗಿಣ್ಣಿನ ಗಡ್ಡೆಗಳನ್ನು ಅವರ ಸಾವಿರಕ್ಕೆ ಪ್ರಧಾನನಾದವನಿಗೆ ಕೊಟ್ಟು ನಿನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸಿ ಅವರ ಗುರುತನ್ನು ತಕ್ಕೊಂಡು ಬಾ ಅಂದನು.

19. शाऊल, और वे भाई, और समस्त इस्राएली पुरूष एला नाम तराई में पिशितलयों से लड़ रहे थे।

19. ಆಗ ಸೌಲನೂ ಇವರೂ ಇಸ್ರಾಯೇಲ್ಯರೆಲ್ಲರೂ ಫಿಲಿಷ್ಟಿ ಯರ ಸಂಗಡ ಏಲಾ ತಗ್ಗಿನಲ್ಲಿ ಯುದ್ಧಮಾಡುತ್ತಿದ್ದರು.

20. और दाऊद बिहान को सबेरे उठ, भेड़ बकरियों को किसी रखवाले के हाथ में छोड़कर, उन वस्तुओं को लेकर चला; और जब सेना रणभूमि को जा रही, और संग्राम के लिये ललकार रही थी, उसी समय वह गाड़ियों के पड़ाव पर पहुंचा।

20. ದಾವೀದನು ಉದಯದಲ್ಲಿ ಎದ್ದು ಕುರಿ ಕಾಯುವವನ ವಶಕ್ಕೆ ಕುರಿಗಳನ್ನು ಬಿಟ್ಟು ತನ್ನ ತಂದೆಯಾದ ಇಷಯನು ತನಗೆ ಆಜ್ಞಾಪಿಸಿದ ಹಾಗೆಯೇ ತಕ್ಕೊಂಡು ಹೋಗಿ ಸೈನ್ಯವು ಯುದ್ಧಕ್ಕೆ ಆರ್ಭಟಿಸಿ ಹೊರಡುವಾಗ ಸಾಮಗ್ರಿ ಇರುವ ಸ್ಥಳಕ್ಕೆ ಬಂದನು.

21. तब इस्राएलियों और पलिश्तियों ने अपनी अपनी सेना आम्हने साम्हने करके पांति बांन्धी।

21. ಇಸ್ರಾಯೇಲ್ಯರೂ ಫಿಲಿಷ್ಟಿ ಯರೂ ಸೈನ್ಯಕ್ಕೆದುರಾಗಿ ಸೈನ್ಯ ವ್ಯೂಹ ಕಟ್ಟಿಕೊಂಡಿದ್ದರು.

22. औ दाऊद अपनी समग्री सामान के रखवाले के हाथ में छोड़कर रणभूमि को दौड़ा, और अपने भाइयों के पास जाकर उनका कुशल क्षेम पूछा।

22. ಆಗ ದಾವೀದನು ತಾನು ತಕ್ಕೊಂಡು ಬಂದದ್ದನ್ನು ಸಾಮಗ್ರಿ ಕಾಯುವವನ ಕೈಯಲ್ಲಿ ಇಟ್ಟು ರಣರಂಗಕ್ಕೆ ಓಡಿಹೋಗಿ ತನ್ನ ಸಹೋದರರ ಬಳಿಗೆ ಬಂದು ಅವರನ್ನು ವಂದಿಸಿದನು.

23. वह उनके साथ बातें कर ही रहा था, कि पलिश्तियों की पांतियों में से वह वीर, अर्थात् गतवासी गालियत नाम वह पलिश्ती योद्धा चढ़ आया, और पहिले की सी बातें कहने लगा। और दाऊद ने उन्हें सुना।

23. ಅವನು ಇವರ ಸಂಗಡ ಮಾತನಾಡುತ್ತಾ ಇರುವಾಗ ಇಗೋ, ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ಫಿಲಿಷ್ಟಿಯರ ಸೈನ್ಯದಿಂದ ಹೊರಟು ಮೊದಲಿನ ಹಾಗೆಯೇ ಮಾತನಾಡಿದನು; ಆ ಮಾತುಗಳನ್ನು ದಾವೀದನು ಕೇಳಿದನು.

24. उस पुरूष को देखकर सब इस्राएली अत्यन्त भय खाकर उसके साम्हने से भागे।

24. ಇಸ್ರಾಯೇಲ್ ಮನುಷ್ಯ ರೆಲ್ಲರೂ ಅವನನ್ನು ನೋಡಿ ಬಹು ಭಯಪಟ್ಟು ಅವನ ಬಳಿಯಿಂದ ಓಡಿಹೋದರು.

25. फिर इस्राएली पुरूष कहने लगे, क्या तुम ने उस पुरूष को देखा है जो चढ़ा आ रहा है? निश्चय वह इस्राएलियों को ललकारने को चढ़ा आता है; और जो कोई उसे मार डालेगा उसको राजा बहुत धन देगा, और अपनी बेटी ब्याह देगा, और उसके पिता के घराने को इस्राएल में स्वतन्त्रा कर देगा।

25. ಇಸ್ರಾಯೇಲ್ ಮನು ಷ್ಯರು--ಏರಿ ಬಂದ ಈ ಮನುಷ್ಯನನ್ನು ನೋಡಿ ದಿರೋ? ಇಸ್ರಾಯೇಲನ್ನು ಹೀಯಾಳಿಸಲು ಏರಿ ಬಂದಿದ್ದಾನಲ್ಲಾ. ಯಾವನು ಇವನನ್ನು ಕೊಂದುಬಿಡು ವನೋ ಅವನನ್ನು ಅರಸನು ಬಹಳ ಐಶ್ವರ್ಯ ವಂತನಾಗ ಮಾಡಿ ಅವನಿಗೆ ತನ್ನ ಮಗಳನ್ನು ಕೊಟ್ಟು ಅವನ ತಂದೆಯ ಮನೆಯನ್ನು ಇಸ್ರಾಯೇಲ್ಯರಲ್ಲಿ ಸರ್ವ ಮಾನ್ಯವನ್ನು ಕೊಡುವನು ಅಂದರು.

26. तब दाऊद ने उन पुरूषों से जो उसके आस पास खड़े थे पूछा, कि जो उस पलिश्ती को मारके इस्राएलियों की नामधराई दूर करेगा उसके लिये क्या किया जाएगा? वह खतनारहित पलिश्ती तो क्या है कि जीवित परमेश्वर की सेना को ललकारे?

26. ಆಗ ದಾವೀದನು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರಿಗೆ--ಈ ಫಿಲಿಷ್ಟಿಯನನ್ನು ಕೊಂದು ಇಸ್ರಾಯೇಲಿನ ಮೇಲಿನಿಂದ ನಿಂದೆಯನ್ನು ತೆಗೆದುಬಿಡುವ ಆ ಮನುಷ್ಯನಿಗೆ ಏನು ಮಾಡಲ್ಪಡುವದು? ಯಾಕಂದರೆ ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ಹೀಯಾ ಳಿಸುವದಕ್ಕೆ ಎಷ್ಟರವನು ಅಂದನು.

27. तब लोगों ने उस से वही बातें कहीं, अर्थात् यह, कि जो कोई उसे मारेगा उस से ऐसा ऐसा किया जाएगा।

27. ಜನರು ಆ ಮಾತಿಗೆ ಸರಿಯಾಗಿ--ಅವನನ್ನು ಕೊಂದವನಿಗೆ ಈ ಪ್ರಕಾರ ಮಾಡಲ್ಪಡುವದೆಂದು ಹೇಳಿದರು;

28. जब दाऊद उन मनुष्यों से बातें कर रहा था, तब उसका बड़ा भाई एलीआब सुन रहा था; और एलीआब दाऊद से बहुत क्रोधित होकर कहने लगा, तू यहां क्या आया है? और जंगल में उन थोड़ी सी भेड़ बकरियों को तू किस के पास छोड़ आया है? तेरा अभिमान और तेरे मन की बुराई मुझे मालूम है; तू तो लड़ाई देखने के लिये यहां आया है।

28. ಆದರೆ ಅವನು ಆ ಮನುಷ್ಯರ ಸಂಗಡ ಮಾತನಾಡುತ್ತಿರು ವದನ್ನು ಅವನ ಹಿರಿಯ ಸಹೋದರನಾದ ಎಲೀಯಾ ಬನು ಕೇಳಿ ಅವನ ಮೇಲೆ ಕೋಪಗೊಂಡು--ನೀನು ಇಲ್ಲಿಗೆ ಬಂದದ್ದೇನು? ಅಡವಿಯಲ್ಲಿರುವ ಆ ಸ್ವಲ್ಪ ಕುರಿಗಳನ್ನು ಯಾರ ವಶಕ್ಕೆ ಒಪ್ಪಿಸಿ ಬಂದೆ? ನಿನ್ನ ಗರ್ವವನ್ನೂ ನಿನ್ನ ಹೃದಯದ ಅಹಂಕಾರವನ್ನೂ ನಾನು ಬಲ್ಲೆನು; ನೀನು ಯುದ್ಧವನ್ನು ನೋಡಲು ಇಳಿದು ಬಂದಿದ್ದೀ ಅಂದನು.

29. दाऊद ने कहा, मैं ने अब क्या किया है, वह तो निरी बात थी?

29. ಅದಕ್ಕೆ ದಾವೀದನು--ನಾನು ಈಗ ಮಾಡಿದ್ದೇನು? ಮಾತನಾಡಿದೆನಷ್ಟೆ ಅಂದನು.

30. तब उस ने उसके पास से मुंह फेरके दूसरे के सम्मुख होकर वैसी ही बात कही; और लोगों ने उसे पहिले की नाई उत्तर दिया।

30. ಅವನನ್ನು ಬಿಟ್ಟು ಬೇರೊಬ್ಬನ ಕಡೆಗೆ ತಿರಿಗಿಕೊಂಡು ಹಾಗೆಯೇ ಕೇಳಿದನು. ಆಗ ಜನರು ಮೊದಲು ಹೇಳಿದ ಹಾಗೆಯೇ ಅವನಿಗೆ ಪ್ರತ್ಯುತ್ತರಕೊಟ್ಟರು.

31. जब दाऊद की बातों की चर्चा हुई, तब शाऊल को भी सुनाई गई; औश्र उस ने उसे बुलवा भेजा।

31. ದಾವೀದನು ಹೇಳಿದ ಮಾತುಗಳನ್ನು ಕೇಳಿದವರು ಸೌಲನಿಗೆ ತಿಳಿಸಿದರು. ಅವನು ಅವನನ್ನು ಕರೇ ಕಳುಹಿಸಿದನು.

32. तब दाऊद ने शाऊल से कहा, किसी मनुष्य का मन उसके कारण कच्चा न हो; तेरा दास जाकर उस पलिश्ती से लड़ेगा।

32. ಆಗ ದಾವೀದನು ಸೌಲನಿಗೆ--ಅವನ ನಿಮಿತ್ತ ವಾಗಿ ಯಾವನ ಹೃದಯವು ಕುಗ್ಗಬಾರದು; ನಿನ್ನ ಸೇವಕನು ಹೋಗಿ ಈ ಫಿಲಿಷ್ಟಿಯನ ಸಂಗಡ ಯುದ್ಧ ಮಾಡುವನು ಅಂದನು.

33. शाऊल ने दाऊद से कहा, तू जाकर उस पलिश्ती के विरूद्ध नहीं युद्ध कर सकता; क्योंकि तू तो लड़का ही है, और वह लड़कपन ही से योद्धा है।

33. ಆಗ ಸೌಲನು ದಾವೀದ ನಿಗೆ--ಈ ಫಿಲಿಷ್ಟಿಯನ ಮೇಲೆ ಯುದ್ಧಮಾಡಲು ನಿನ್ನಿಂದಾಗದು; ಯಾಕಂದರೆ ನೀನು ಹುಡುಗನಾಗಿದ್ದೀ; ಅವನು ಚಿಕ್ಕಂದಿನಿಂದ ಯುದ್ಧದ ಮನುಷ್ಯನಾಗಿದ್ದಾನೆ ಅಂದನು.

34. दाऊद ने शाऊल से कहा, तेरा दास अपने पिता की भेड़ बकरियां चराता था; और जब कोई सिंह वा भालू झुंड में से मेम्ना उठा ले गया,
इब्रानियों 11:33

34. ದಾವೀದನು ಸೌಲನಿಗೆ--ನಿನ್ನ ಸೇವಕನು ತನ್ನ ತಂದೆಯ ಕುರಿಗಳನ್ನು ಮೇಯಿಸಿಕೊಂಡಿರುವಾಗ ಸಿಂಹವೂ ಕರಡಿಯೂ ಬಂದು ಮಂದೆಯಲ್ಲಿ ಇರುವ ಕುರಿಮರಿಯನ್ನು ಹಿಡಿದವು.

35. तब मैं ने उसका पीछा करके उसे मारा, और मेम्ने को उसके मुंह से छुड़ाया; और जब उस ने मुझ पर चढ़ाई की, तब मैं ने उसके केश को पकड़कर उसे मार डाला।

35. ಆಗ ನಾನು ಅದರ ಹಿಂದೆ ಹೋಗಿ ಅದನ್ನು ಹೊಡೆದು ಆ ಕುರಿಮರಿಯನ್ನು ಅದರ ಬಾಯಿಂದ ತಪ್ಪಿಸಿದೆನು. ಅದು ನನ್ನ ಮೇಲೆ ಹಿಂತಿರುಗಿ ಬಿದ್ದಾಗ ನಾನು ಅದರ ಗಡ್ಡವನ್ನು ಹಿಡಿದು ಹೊಡೆದು ಕೊಂದುಹಾಕಿದೆನು.

36. तेरे दास ने सिंह और भालू दोनों को मार डाला; और वह खतनारहित पलिश्ती उनके समान हो जाएगा, क्योंकि उस ने जीवित परमेश्वर की सेना को ललकारा है।

36. ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ ಆ ಕರಡಿಯನ್ನೂ ಕೊಂದು ಬಿಟ್ಟನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ಪ್ರತಿಭಟಿಸಿದ್ದರಿಂದ ಅವುಗಳಲ್ಲಿ ಒಂದರ ಹಾಗೆ ಆಗುವನು ಅಂದನು.

37. फिर दाऊद ने कहा, यहोवा जिस ने मुझ सिंह और भालू दोनों के पंजे से बचाया है, वह मुझे उस पलिश्ती के हाथ से भी बचाएगा। शाऊल ने दाऊद से कहा, जा, यहोवा तेरे साथ रहे।

37. ಇದಲ್ಲದೆ ದಾವೀದನು--ನನ್ನನ್ನು ಸಿಂಹದ ಕೈಗೂ ಕರಡಿಯ ಕೈಗೂ ತಪ್ಪಿಸಿ ಬಿಟ್ಟ ಕರ್ತನು ಈ ಫಿಲಿಷ್ಟಿಯನ ಕೈಗೂ ನನ್ನನ್ನು ತಪ್ಪಿಸಿಬಿಡುವನು ಅಂದನು. ಆಗ ಸೌಲನು ದಾವೀದ ನಿಗೆ--ನೀನು ಹೋಗು; ಕರ್ತನು ನಿನ್ನ ಸಂಗಡ ಇರಲಿ ಅಂದನು.

38. तब शाऊल ने अपने वस्त्रा दाऊद को पहिनाए, और पीतल का टोप उसके सिर पर रख दिया, और झिलम उसको पहिनाया।

38. ಆಗ ಸೌಲನು ದಾವೀದನಿಗೆ ತನ್ನ ಆಯುಧಗಳನ್ನು ತೊಡಿಸಿ ಅವನ ತಲೆಯ ಮೇಲೆ ಒಂದು ಹಿತ್ತಾಳೆಯ ಶಿರಸ್ತ್ರಾಣವನ್ನು ಇಟ್ಟು ಅವನಿಗೆ ಕವಚವನ್ನು ತೊಡಿಸಿದನು.

39. और दाऊद ने उसकी तलवार वस्त्रा के ऊपर कसी, और चलने का यत्न किया; उस ने तो उनको न परखा था। इसलिये दाऊद ने शाऊल से कहा, इन्हें पहिने हुए मुझ से चला नहीं जाता, क्योंकि मैं ने नहीं परखा। और दाऊद ने उन्हें उतार दिया।

39. ದಾವೀದನು ಅವನ ಕತ್ತಿಯನ್ನು ತನ್ನ ಆಯುಧಗಳ ಮೇಲೆ ಕಟ್ಟಿಕೊಂಡು ಹೋಗಬೇಕೆಂದಿದ್ದನು. ಆದರೆ ಅದು ಅವನಿಗೆ ಅಭ್ಯಾಸ ವಿದ್ದಿಲ್ಲ, ಆಗ ದಾವೀದನು ಸೌಲನಿಗೆ--ನನಗೆ ಅವುಗಳ ಅಭ್ಯಾಸವಿಲ್ಲದ್ದರಿಂದ ಇವುಗಳ ಸಂಗಡ ಹೋಗ ಲಾರೆನು ಎಂದು ಹೇಳಿ ಅವುಗಳನ್ನು ಬಿಚ್ಚಿಹಾಕಿ

40. तब उस ने अपनी लाठी हाथ में ले नाले में से पांच चिकने पत्थर छांटकर अपनी चरवाही की थैली, अर्थात् अपने झोले में रखे; और अपना गोफन हाथ में लेकर पलिश्ती के निकट चला।

40. ತನ್ನ ಕೋಲನ್ನು ತನ್ನ ಕೈಯಲ್ಲಿ ಹಿಡಿದು ಹಳ್ಳದಲ್ಲಿರುವ ಐದು ನುಣುಪಾದ ಕಲ್ಲುಗಳನ್ನು ಆರಿಸಿಕೊಂಡು ಅವು ಗಳನ್ನು ತನಗಿರುವ ಕುರುಬರ ಚೀಲದಲ್ಲಿ ಹಾಕಿ ಕವಣೆ ಯನ್ನು ತನ್ನ ಕೈಯಲ್ಲಿ ಹಿಡುಕೊಂಡು ಆ ಫಿಲಿಷ್ಟಿಯನ ಬಳಿಗೆ ಹೋದನು.

41. और पलिश्ती चलते चलते दाऊद के निकट पहुंचने लगा, और जो जन उसकी बड़ी ढाल लिए था वह उसके आगे आगे चला।

41. ಆಗ ಫಿಲಿಷ್ಟಿಯನು ತ್ವರೆಯಾಗಿ ದಾವೀದನ ಸವಿಾಪಕ್ಕೆ ಬಂದನು.

42. जब पलिश्ती ने दृष्टि करके दाऊद को देखा, तब उसे तुच्छ जाना; क्योंकि वह लड़का ही था, और उसके मुख पर लाली झलकती थी, औश्र वह सुन्दर था।

42. ಗುರಾಣಿ ಹಿಡಿಯುವವನು ಅವನ ಮುಂದೆ ನಡೆದನು. ಫಿಲಿಷ್ಟಿಯನು ದಾವೀದ ನನ್ನು ದೃಷ್ಟಿಸಿ ನೋಡಿ ಅವನು ಕೆಂಪಾದವನಾಗಿಯೂ ಸೌಂದರ್ಯ ರೂಪವುಳ್ಳವನಾಗಿಯೂ ಇರುವ ಹುಡು ಗನಾಗಿದ್ದದರಿಂದ ಅವನನ್ನು ತಿರಸ್ಕರಿಸಿ ದಾವೀದನಿಗೆ

43. तब पलिश्ती ने दाऊद से कहा, क्या मैं कुत्ता हूं, कि तू लाठी लेकर मेरे पास आता है? तब पलिश्ती अपने देवताओं के नाम लेकर दाऊद को कोसने लगा।

43. ನೀನು ಕೋಲು ಹಿಡುಕೊಂಡು ನನ್ನ ಬಳಿಗೆ ಬರುವ ಹಾಗೆ ನಾನು ನಾಯಿಯೋ ಎಂದು ಹೇಳಿ ಆ ಫಿಲಿಷ್ಟಿಯನು ತನ್ನ ದೇವರುಗಳಿಂದ ದಾವೀದನನ್ನು ಶಪಿಸಿದನು.

44. फिर पलिश्ती ने दाऊद से कहा, मेरे पास आ, मैं तेरा मांस आकाश के पक्षियों और बनपशुओं को दे दूंगा।

44. ದಾವೀದನಿಗೆ--ನೀನು ನನ್ನ ಬಳಿಗೆ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು ಅಂದನು.

45. दाऊद ने पलिश्ती से कहा, तू तो तलवार और भाला और सांग लिए हुए मेरे पास आता है; परन्तु मैं सेनाओं के यहोवा के नाम से तेरे पास आता हूं, जो इस्राएली सेना का परमेश्वर है, और उसी को तू ने ललकारा है।

45. ಆಗ ದಾವೀದನು ಫಿಲಿಷ್ಟಿಯನಿಗೆ--ನೀನು ಕತ್ತಿ ಈಟಿಯ ಗುರಾಣಿಯ ಸಂಗಡ ನನ್ನ ಬಳಿಗೆ ಬರುತ್ತೀ; ಆದರೆ ನೀನು ನಿಂದಿಸಿದ ಇಸ್ರಾಯೇ ಲಿನ ಸೈನ್ಯಗಳ ದೇವರಾದಂಥ ಸೈನ್ಯಗಳ ಕರ್ತನ ಹೆಸರಿ ನಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ.

46. आज के दिन यहोवा तुझ को मेरे हाथ में कर देगा, और मैं तुझ को मारूंगा, और तेरा सिर तेरे धड़ से अलग करूंगा; और मैं आज के दिन पलिश्ती सेना की लोथें आकाश के पक्षियों और पृथ्वी के जीव जन्तुओं को दे दूंगा; तब समस्त पृथ्वी के लोग जान लेंगे कि इस्राएल में एक परमेश्वर है।

46. ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು.

47. और यह समस्त मण्डली जान लेगी की यहोवा तलवार वा भाले के द्वारा जयवन्त नहीं करता, इसलिये कि संग्राम तो यहोवा का है, और वही तुम्हें हमारे हाथ में कर देगा।

47. ಈ ದಿನ ಇಸ್ರಾಯೇಲ್ಯರೊಳಗೆ ದೇವರು ಇದ್ದಾನೆಂದು ಭೂಲೋಕದವರೆಲ್ಲರೂ ತಿಳಿ ಯುವರು. ಕರ್ತನು ಕತ್ತಿಯಿಂದಲೂ ಈಟಿಯಿಂದಲೂ ರಕ್ಷಿಸುವದಿಲ್ಲ ಎಂದು ಈ ಸಭೆಯೆಲ್ಲಾ ತಿಳಿದುಕೊಳ್ಳು ವದು; ಯಾಕಂದರೆ ಯುದ್ಧವು ಕರ್ತನದು; ಆತನು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.

48. जब पलिश्ती उठकर दाऊद का साम्हना करने के लिये निकट आया, तब दाऊद सना की ओर पलिश्ती का साम्हना करने के लिये फुर्ती से दौड़ा।

48. ಆ ಪಿಲಿಷ್ಟಿಯನು ಎದ್ದು ದಾವೀದನಿಗೆ ಎದುರಾಗಿ ಸವಿಾಪಿಸಿ ಬರುವಾಗ ದಾವೀದನು ತ್ವರೆಯಾಗಿ ಆ ಸೈನ್ಯಕ್ಕೆ ಫಿಲಿಷ್ಟಿಯನಿಗೆದುರಿಗೆ ಓಡಿಹೋಗಿ

49. फिर दाऊद ने अपनी थैली में हाथ डालकर उस में से एक पत्थर निकाला, और उसे गोफन में रखकर पलिश्ती के माथे पर ऐसा मारा कि पत्थर उसके माथे के भीतर घुस गया, और वह भूमि पर मुंह के बल गिर पड़ा।

49. ತನ್ನ ಕೈಯನ್ನು ಚೀಲದಲ್ಲಿ ಹಾಕಿ ಅದರಲ್ಲಿರುವ ಒಂದು ಕಲ್ಲನ್ನು ತೆಗೆದುಕೊಂಡು ಕವಣೆಯಲ್ಲಿಟ್ಟು ಬೀಸಿ ಫಿಲಿಷ್ಟಿ ಯನ ಹಣೆಯನ್ನು ತಾಕುವಂತೆ ಎಸೆದನು. ಆ ಕಲ್ಲು ಅವನ ಹಣೆಯೊಳಗೆ ಹೊಕ್ಕಿದ್ದರಿಂದ ಅವನು ನೆಲದ ಮೇಲೆ ಬೋರಲು ಬಿದ್ದನು.

50. यों दाऊद ने पलिश्ती पर गोफन और एक ही पत्थर के द्वारा प्रबल होकर उसे मार डाला; परन्तु दाऊद के हाथ में तलवार न थी।

50. ಹೀಗೆಯೇ ದಾವೀದನು ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನ ಮೇಲೆ ಬಲಗೊಂಡು ಫಿಲಿಷ್ಟಿಯನನ್ನು ಹೊಡೆದು ಅವನನ್ನು ಕೊಂದುಹಾಕಿದನು.

51. तब दाऊद दौड़कर पलिश्ती के ऊपर खड़ा हुआ, और उसकी तलवार पकड़कर मियान से खींची, और उसको घात किया, और उसका सिर उसी तलवार से काट डाला। यह देखकर कि हमारा वीर मर गया पलिश्ती भाग गए।

51. ದಾವೀದನ ಕೈಯಲ್ಲಿ ಕತ್ತಿಯು ಇರಲಿಲ್ಲ. ದಾವೀದನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು ಅವನ ಕತ್ತಿಯನ್ನೇ ಒರೆಯಿಂದ ಕಿತ್ತು ಅವನ ತಲೆಯನ್ನು ಕಡಿದು ಅವನನ್ನು ಕೊಂದು ಹಾಕಿದನು. ಫಿಲಿಷ್ಟಿಯರು ತಮ್ಮ ಪರಾಕ್ರಮಶಾಲಿ ಸತ್ತುಹೋದದ್ದನ್ನು ಕಂಡಾಗ ಓಡಿಹೋದರು.

52. इस पर इस्राएली और यहूद पुरूष ललकार उठे, और गत और एक्रोन से फाटकों तक पलिश्तियों का पीछा करते गए, और घायल पलिश्ती शारैम के मार्ग में और गत और एक्रोन तक गिरते गए।

52. ಇಸ್ರಾಯೇಲ್ ಮನುಷ್ಯರೂ ಯೆಹೂದದ ಮನು ಷ್ಯರೂ ಎದ್ದು ಆರ್ಭಟಿಸಿ ತಗ್ಗಿನ ಮೇರೆಯ ವರೆಗೂ ಎಕ್ರೋನಿನ ಬಾಗಲುಗಳ ವರೆಗೂ ಫಿಲಿಷ್ಟಿಯರನ್ನು ಹಿಂದಟ್ಟಿದರು. ಆದರೆ ಕೊಲ್ಲಲ್ಪಟ್ಟ ಫಿಲಿಷ್ಟಿಯರು ಶಾರಯಿಮಿನ ಮಾರ್ಗದಲ್ಲಿ ಗತ್ ವರೆಗೂ ಎಕ್ರೋನಿನ ವರೆಗೂ ಬಿದ್ದಿದ್ದರು.

53. तब इस्राएली पलिश्तियों का पीछा छोड़कर लौट आए, और उनके डेरों को लूट लिया।

53. ಇಸ್ರಾಯೇಲ್ ಮಕ್ಕಳು ಫಿಲಿಷ್ಟಿಯರನ್ನು ಓಡಿಸಿಬಿಟ್ಟ ತರುವಾಯ ತಿರಿಗಿ ಬಂದು ಅವರ ಡೇರೆಗಳನ್ನು ಸೂರೆಮಾಡಿದರು.

54. और दाऊद पलिश्ती का सिर यरूशलेम में ले गया; और उसके हथियार अपने डेरे में धर लिए।।

54. ದಾವೀ ದನು ಫಿಲಿಷ್ಟಿಯನ ತಲೆಯನ್ನು ತಕ್ಕೊಂಡು ಅದನ್ನು ಯೆರೂಸಲೇಮಿಗೆ ತಂದನು. ಆದರೆ ಅವನ ಆಯುಧಗಳನ್ನು ತನ್ನ ಡೇರೆಯಲ್ಲಿ ಇಟ್ಟನು.

55. जब शाऊल ने दाऊद को उस पलिश्ती का साम्हना करने के लिये जाते देखा, तब उस ने अपने सेनापति अब्नेर से पूछा, हे अब्नेर, वह जवान किस का पुत्रा है? अब्नेर ने कहा, हे राजा, तेरे जीवन की शपथ, मैं नहीं जानता।

55. ದಾವೀದನು ಫಿಲಿಷ್ಟಿಯನಿಗೆ ಎದುರಾಗಿ ಹೊರಟ ದ್ದನ್ನು ಸೌಲನು ನೋಡಿದಾಗ ತನ್ನ ಸೈನ್ಯಾಧಿಪತಿಯಾದ ಅಬ್ನೇರನಿಗೆ--ಅಬ್ನೇರನೇ, ಈ ಯುವಕನು ಯಾರ ಮಗನು ಅಂದನು. ಅದಕ್ಕೆ ಅಬ್ನೇರನು--ಅರಸನೇ, ನಿನ್ನ ಜೀವದಾಣೆ ನಾನರಿಯೆ ಅಂದನು.

56. राजा ने कहा, तू पूछ ले कि वह जवान किस का पुत्रा है।

56. ಅದಕ್ಕೆ ಅರಸನು ಆ ಯೌವನಸ್ಥನು ಯಾರ ಮಗನೆಂದು ವಿಚಾರಿಸು ಅಂದನು.

57. जब दाऊद पलिश्ती को मारकर लौटा, तब अब्नेर ने उसे पलिश्ती का सिर हाथ में लिए हुए शाऊल के साम्हने पहुंचाया।

57. ದಾವೀದನು ಫಿಲಿಷ್ಟಿಯನನ್ನು ಕೊಂದು ಅವನ ತಲೆಯನ್ನು ತೆಗೆದುಕೊಂಡು ತಿರಿಗಿ ಬರುವಾಗ ಅಬ್ನೇರನು ಅವನನ್ನು ಕರೆದು ಸೌಲನ ಮುಂದೆ ನಿಲ್ಲಿಸಿದನು.ಆಗ ಸೌಲನು--ಯೌವನ ಸ್ತನೇ, ನೀನು ಯಾರ ಮಗನು ಎಂದು ಅವನನ್ನು ಕೇಳಿದನು. ಅದಕ್ಕೆ ದಾವೀದನು--ನಾನು ನಿನ್ನ ಸೇವಕ ನಾಗಿರುವ ಬೇತ್ಲೆಹೇಮಿನವನಾದ ಇಷಯನ ಮಗನು ಅಂದನು.

58. शाऊल ने उस से पूछा, हे जवान, तू किस का पुत्रा है? दाऊद ने कहा, मैं तो तेरे दास बेतलेहेमी यिशै का पुत्रा हूं।।

58. ಆಗ ಸೌಲನು--ಯೌವನ ಸ್ತನೇ, ನೀನು ಯಾರ ಮಗನು ಎಂದು ಅವನನ್ನು ಕೇಳಿದನು. ಅದಕ್ಕೆ ದಾವೀದನು--ನಾನು ನಿನ್ನ ಸೇವಕ ನಾಗಿರುವ ಬೇತ್ಲೆಹೇಮಿನವನಾದ ಇಷಯನ ಮಗನು ಅಂದನು.



Shortcut Links
1 शमूएल - 1 Samuel : 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 20 | 21 | 22 | 23 | 24 | 25 | 26 | 27 | 28 | 29 | 30 | 31 |
उत्पत्ति - Genesis | निर्गमन - Exodus | लैव्यव्यवस्था - Leviticus | गिनती - Numbers | व्यवस्थाविवरण - Deuteronomy | यहोशू - Joshua | न्यायियों - Judges | रूत - Ruth | 1 शमूएल - 1 Samuel | 2 शमूएल - 2 Samuel | 1 राजाओं - 1 Kings | 2 राजाओं - 2 Kings | 1 इतिहास - 1 Chronicles | 2 इतिहास - 2 Chronicles | एज्रा - Ezra | नहेम्याह - Nehemiah | एस्तेर - Esther | अय्यूब - Job | भजन संहिता - Psalms | नीतिवचन - Proverbs | सभोपदेशक - Ecclesiastes | श्रेष्ठगीत - Song of Songs | यशायाह - Isaiah | यिर्मयाह - Jeremiah | विलापगीत - Lamentations | यहेजकेल - Ezekiel | दानिय्येल - Daniel | होशे - Hosea | योएल - Joel | आमोस - Amos | ओबद्याह - Obadiah | योना - Jonah | मीका - Micah | नहूम - Nahum | हबक्कूक - Habakkuk | सपन्याह - Zephaniah | हाग्गै - Haggai | जकर्याह - Zechariah | मलाकी - Malachi | मत्ती - Matthew | मरकुस - Mark | लूका - Luke | यूहन्ना - John | प्रेरितों के काम - Acts | रोमियों - Romans | 1 कुरिन्थियों - 1 Corinthians | 2 कुरिन्थियों - 2 Corinthians | गलातियों - Galatians | इफिसियों - Ephesians | फिलिप्पियों - Philippians | कुलुस्सियों - Colossians | 1 थिस्सलुनीकियों - 1 Thessalonians | 2 थिस्सलुनीकियों - 2 Thessalonians | 1 तीमुथियुस - 1 Timothy | 2 तीमुथियुस - 2 Timothy | तीतुस - Titus | फिलेमोन - Philemon | इब्रानियों - Hebrews | याकूब - James | 1 पतरस - 1 Peter | 2 पतरस - 2 Peter | 1 यूहन्ना - 1 John | 2 यूहन्ना - 2 John | 3 यूहन्ना - 3 John | यहूदा - Jude | प्रकाशितवाक्य - Revelation |

Explore Parallel Bibles
21st Century KJV | A Conservative Version | American King James Version (1999) | American Standard Version (1901) | Amplified Bible (1965) | Apostles' Bible Complete (2004) | Bengali Bible | Bible in Basic English (1964) | Bishop's Bible | Complementary English Version (1995) | Coverdale Bible (1535) | Easy to Read Revised Version (2005) | English Jubilee 2000 Bible (2000) | English Lo Parishuddha Grandham | English Standard Version (2001) | Geneva Bible (1599) | Hebrew Names Version | Hindi Bible | Holman Christian Standard Bible (2004) | Holy Bible Revised Version (1885) | Kannada Bible | King James Version (1769) | Literal Translation of Holy Bible (2000) | Malayalam Bible | Modern King James Version (1962) | New American Bible | New American Standard Bible (1995) | New Century Version (1991) | New English Translation (2005) | New International Reader's Version (1998) | New International Version (1984) (US) | New International Version (UK) | New King James Version (1982) | New Life Version (1969) | New Living Translation (1996) | New Revised Standard Version (1989) | Restored Name KJV | Revised Standard Version (1952) | Revised Version (1881-1885) | Revised Webster Update (1995) | Rotherhams Emphasized Bible (1902) | Tamil Bible | Telugu Bible (BSI) | Telugu Bible (WBTC) | The Complete Jewish Bible (1998) | The Darby Bible (1890) | The Douay-Rheims American Bible (1899) | The Message Bible (2002) | The New Jerusalem Bible | The Webster Bible (1833) | Third Millennium Bible (1998) | Today's English Version (Good News Bible) (1992) | Today's New International Version (2005) | Tyndale Bible (1534) | Tyndale-Rogers-Coverdale-Cranmer Bible (1537) | Updated Bible (2006) | Voice In Wilderness (2006) | World English Bible | Wycliffe Bible (1395) | Young's Literal Translation (1898) | Hindi Reference Bible |